ಮಧುರಾ ಗಾಂವ್ಕರ್ ಕವಿತೆ-ನಿನ್ನ ಸನಿಹ ಬೇಕಿತ್ತು

ಕಾವ್ಯ ಸಂಗಾತಿ

ಮಧುರಾ ಗಾಂವ್ಕರ್

ನಿನ್ನ ಸನಿಹ ಬೇಕಿತ್ತು

ನೀ ಕಂಡ ಕ್ಷಣದಲ್ಲಿ ಕಂಗಳಕಿಡಿಗೆ
ದೀಪವೇ ಹೊತ್ತಿದಂತಾಯ್ತು
ಮೊಗವ ಕಂಡಾಗ ಶಶಿಯಿಳಿದು
ಕರದೊಳಗೆ ಬಂದಂತಾಯ್ತು

ತುಸು ಸಮಯ ನಿನ್ನೊಡನೆ
ತೋಳೊಳಗೆ ಸಿಲುಕಬೇಕಿತ್ತು
ಮೊಗವ ಮುಸುಕಿದ ಹೆರಳನ್ನು
ಬೆರಳಿಂದ ನೀ ಸರಿಸಬೇಕಿತ್ತು

ದೂರದೂರದ ಅಂತರವು ಕುಗ್ಗಿ
ನಿನ್ನೆದೆಗೆ ನಾ ಒರಗಬೇಕಿತ್ತು
ನಯನದ ಭಾಷೆಗೆ ಮನ ಹಿಗ್ಗಿ
ಮೌನ ನಗುವಾವರಿಸಬೇಕಿತ್ತು

ಸದ್ದುಮಾಡದೆ ಎದೆಗೆ ಹೆಜ್ಜೆಯಿಟ್ಟೆ
ಮೆಲ್ಲಮೆಲ್ಲನೆ ಗುರುತಾಗದಂತೆ
ಅದೆಂತ ಚುಂಬಕಮಾಯೆ ನೀನು
ಬರಸೆಳೆದೆಯಲ್ಲ‌ ಗುರುತ್ವದಂತೆ


ಮಧುರಾ ಗಾಂವ್ಕರ್

3 thoughts on “ಮಧುರಾ ಗಾಂವ್ಕರ್ ಕವಿತೆ-ನಿನ್ನ ಸನಿಹ ಬೇಕಿತ್ತು

Leave a Reply

Back To Top