ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಬಾಳಿನ ಕುಂಚ
ತೋಟದ ಅಂಚಲಿ ಹೂವಿನ ಗೊಂಚಲು
ಅರಳುತ ನಗುತಿದೆ ಬಾಳಿನ ಕುಂಚವು
ಬಾಳಲಿ ಸವಿದಿಹ ಕಹಿಗಳು ನನ್ನದು
ಸುಗಂಧ ಮಾತದು ಮಾತ್ರವೇ ನಿನ್ನದು
ಬದುಕಿಗೆ ಬಂದಿಹ ಬಾಳಿನ ಬೆಳಕೇ
ನಿಲ್ಲಲು ನೀನು ಬೆಳಕಿನ ತನುಪೇ
ಬದುಕಲ್ಲಿ ನಾನು ಕಂಡಿಹ ಕನಸು
ಹೊನಲಲು ಬರಲಿ ಕನಸಿನ ಬೆಳಕು
ಎನಿತು ಹೇಳಲಿ ಬದುಕಿನ ಬವಣೆ
ಬಾಳಿನ ಒಳಗಿಹ ಕಂದಕ ಕಣಿವೆ
ಅರಿತಿಹರೆಲ್ಲರೂ ಸೋತಿಹರಿಲ್ಲಿ
ಮತ್ತದೇ ಸುಂದರ ಬದುಕಿನ ಗೀಳಿಹುದಿಲ್ಲಿ
ಮಾತನ್ನು ಆಡುತ ನುಡಿಯನು ಸವಿಯುತ
ಮೂಲತಃ ಎಲ್ಲಿ ಎನ್ನುತ ಕೇಳುವವರಿಲ್ಲಿ
ಕಲ್ಪನೆ ನನ್ನದು ಕವಿತೆಯು ನನ್ನದು
ಓದುತ ತಿಳಿದರೆ ಬಾಳದು ನನ್ನದು.
ಮನ್ಸೂರ್ ಮುಲ್ಕಿ