ಕಾವ್ಯ ಸಂಗಾತಿ
ಡಾ. ಹಸೀನಾ ಖಾದ್ರಿ
ಮುತ್ತಿಟ್ಟವನ ಋಣ
ಹಿಡಿದ ಕೈಗಳಲ್ಲಿದ್ದ ಘಮ
ಮೈ ತುಂಬ ಹರಡಿದೆ ಈಗ
ನಿನ್ನದು ಶತಮಾನಕ್ಕೂ
ಮುಗಿಯದ ತುಂಟತನ.
ಮಗುವಿನಂತಹ ನಿನ್ನಲ್ಲಿ
ಅಪ್ಪ ಅಮ್ಮನನ್ನು ತಾಕಿರುವೆ
ಬಿಸುಪು ಅಪ್ಪುಗೆಗಳು
ಭೋರ್ಗರೆವ ಜಲಪಾತ
ನಿಗೂಢ ಪಥಗಳನು ನೆನಪಿಸಿದೆ.
ನಿನ್ನ ಸ್ಪರ್ಶಗಳಲ್ಲಿ ಸಾವಿರ
ವಸಂತ ಋತುಗಳಿರುವ ಗುಟ್ಟು
ನನಗೊಬ್ಬಳಿಗೇ ಗೊತ್ತು;
ನಿನ್ನ ಕಣ್ಣ ಕಾಂತಿಯಲ್ಲಿ
ಎಳೆಬಿಸಿಲ ಹೊತ್ತ ಸೂರ್ಯರು ಅದೆಷ್ಟೋ? ಎಣಿಸಲಾಗಲಿಲ್ಲ ಈ ಬಡವಿಗೆ.
ಪ್ರತಿ ಸಲದ ಮಿಲನದಲ್ಲಿ
ನನ್ನ ಮೈಯ ಹರಗಿದ ರೈತನೇ ಕೇಳು,
ತುತ್ತಿಟ್ಟ, ಮುತ್ತಿಟ್ಟು ಕರುಣೆಯನೇ ಉಣಿಸಿದ ನಿನ್ನ ಋಣವ ಮರೆಯಲಾರೆ ನೂರು ಜನ್ಮಕೂ..
———————–
ಡಾ. ಹಸೀನಾ ಖಾದ್ರಿ
ಬಹಳ ಚೆನ್ನಾಗಿದೆ ಈ ಕವನ
ಧನ್ಯವಾದಗಳು ತಮ್ಮ ಓದಿಗೆ
ಅದ್ಭುತ ಮ್ಯಾಮ್
ಧನ್ಯವಾದಗಳು ತಮ್ಮ ಓದಿಗೆ
ಧನ್ಯವಾದಗಳು ತಮ್ಮಪ್ರತಿಕ್ರಿಯೆಗೆ
ಸುಂದರ ಕಾವ್ಯ
ಧನ್ಯವಾದಗಳು ತಮ್ಮಓದಿಗೆ
ಧನ್ಯವಾದಗಳು