ಮನ್ಸೂರ್ ಮುಲ್ಕಿ ಕವಿತೆ-ಪ್ರೀತಿಯ ಹಾದಿ

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಪ್ರೀತಿಯ ಹಾದಿ

ಗುರುತಿಸದಾದೆನು ನಾನು ನಿನ್ನನು
ಗುರುತಿಸಬೇಕಿದೆ ನೀನೇ ನನ್ನನು
ಒಡಲಿನ ಜರಿ ಇದು ಅಳಿವಿಗೆ ತೆರಳಿದೆ
ಮಂಜಿನ ಕಣ್ಣಲಿ ಸ್ಪರ್ಶವ ಮಾಡಿದೆ

ಬಿರುಕದು ಕಂಡಿದೆ ಕಂದಕ ಮೂಡಲು
ನಲುಗುತ ನಡೆದಿದೆ ಬದುಕನು ಕಾಣಲು
ದೇಹದ ವಯಸ್ಸದು ನಗುವಲು ಮೂಡಿದೆ
ತೊದಲು ಮಾತಲಿ ಕರುಣೆಯ ಕಂಡಿದೆ

ನೋಡಿದೆ ಬದುಕನು ಜೊತೆಯಲಿ ನಡೆಯುತ
ನೋವು ನಲಿವು ಜೊತೆಯಲಿ ಸವಿಯುತ
ಉಸಿರಿನ ಬದುಕಿಗೆ ಪ್ರೀತಿಯ ಕಾಣಿಕೆ
ಎಂದೂ ಮರೆಯದ ನಮ್ಮ ಪಯಣದ ವೇದಿಕೆ

ನಗುವಿನ ಮನೆಯನು ಬದುಕಿನ ಒಳಗೆ
ಕಟ್ಟಲೇಬೇಕು ಉಸಿರಿನವರೆಗೆ
ಹಾದಿಗಳೆಲ್ಲವೂ ಸುಗಮವು ಎಂದೂ
ಪ್ರೀತಿಯೇ ಕಂಡಿಹ ಹಾದಿಯೂ ನಮ್ದು


ಮನ್ಸೂರ್ ಮುಲ್ಕಿ

Leave a Reply

Back To Top