ಕವಿತೆ
ಕಾರ್ಮಿಕರು ನಾವು
ಡಾ.ಪ್ರಸನ್ನ ಹೆಗಡೆ
ಕಾರ್ಮಿಕರು ನಾವು
ಕಾರ್ಮಿಕರು ನಾವು
ಯಂತ್ರದ ವೀಣೆಯ
ತಂತಿಯ ಮೀಟುವ
ವೈಣಿಕರು ನಾವು
ಕಾರ್ಮಿಕರು ನಾವು
ಆರ್ಥಿಕ ದೋಣಿಯ
ಚಂದದಿ ನಡೆಸುವ
ನಾವಿಕರು ನಾವು
ಕಾರ್ಮಿಕರು ನಾವು
ಒಡೆಯನ ಕನಸಿನ
ಬೀಜವ ಬಿತ್ತುವ
ಜೀವಿಗಳು ನಾವು
ಕಾರ್ಮಿಕರು ನಾವು
ಹಗಲಿರುಳೆನ್ನದೆ
ನಿಲ್ಲದೆ ನಡೆಯುವ
ಕಾಲನ ಕಾಲುಗಳು ನಾವು
ಕಾರ್ಮಿಕರು ನಾವು
ಮಳೆಬಿಸಿಲೆನ್ನದೆ
ಕಾರಣ ಒಡ್ಡದೆ
ದುಡಿಯುವ ಜನ ನಾವು
ಕಾರ್ಮಿಕರು ನಾವು
ಗಣಿಯೊಳಗಿಳಿದು
ಕುಲುಮೆಯೊಳ್ಬೆಂದು
ಹೊನ್ನಾಗುವ ಜನ ನಾವು
ಕಾರ್ಮಿಕರು ನಾವು
ಹೊಗೆಯಂಗಳದೊಳಗೆ
ಹಗೆಯನು ಎಣಿಸದೆ
ಹೂ ನಗೆ ಬೀರುವ ಜನ ನಾವು
*********