ಕನ್ನಡ ರಾಜ್ಯೋತ್ಸವ ವಿಶೇಷ
ಡಾ ಡೋ.ನಾ.ವೆಂಕಟೇಶ-
ಕನ್ನಡದ ಕಂದ
ನಾ ಆಧುನಿಕ
ಜಗದ್ವಿಖ್ಯಾತ ಅನ್ನುತ್ತ
ಮತ್ತಿನ ಗತ್ತಿನಲಿ ಮುಲುಕುತ್ತ
ಎಡಕ್ಕೆ ವಾಲತ್ತ ಬಲಕ್ಕೆ ಬಯ್ಯುತ್ತ
ದೇಶ ಧರ್ಮಗಳ ನೀಲಾಮು
ಮಾಡುತ್ತ ಓ!
ಆಧುನಿಕ ಕವಿಯೇ ನಿನಗೆ
ನಿನ್ನ ದರ್ಪಣ ದರ್ಶನ!
ಚೆಲುವ ಕನ್ನಡ ನಾಡು-
ಹೌದು ಕವಿವರ್ಯ ಹೇಳಿದ
ರಸ ಋಷಿಗಳ ಬೀಡು
ಪಂಪರು ರನ್ನರು ಹರಸಿದ ನಾಡು
ಕುಮಾರವ್ಯಾಸರಿಂದ
ಕುವೆಂಪುರವರ ತನಕ
ಬೇಂದ್ರೆಯವರಿಂದ
ಗೋಕಾಕರ ತನಕ
ಕನ್ನಡದ ಆಸ್ತಿ ಮಾಸ್ತಿಯವರಿಂದ-
ಮತ್ತಷ್ಟು ಮಗದಷ್ಟು
ಮಹಾನುಭಾವರಿಂದ
ಕನ್ನಡದ ಸತ್ಯ ನಿತ್ಯ ಸತ್ಯ,
ನಿತ್ಯ ಹರಿದ್ವರ್ಣ!
ಘಮ್ಮೆಂದು ಪಸರಿಸಿದ
ಕಸ್ತೂರಿ ಕನ್ನಡ!
ಕನ್ನಡ ಲೋಕದ ಜ್ಞಾನಿಗಳು ಅಷ್ಟ ಜ್ಞಾನಪೀಠಜ್ಞರು,
ಜಗದ್ವಂದ್ಯರು.
“ಇಂತಿರ್ಪ ಈ ಲೋಕದೊಳ್
ನೀ ಯಾವ ಅಜ್ಞಾನಿ?”
ಓ ಆಧುನಿಕ ಬಿಡು ನಿನ್ನ
ತೆವಲಾಟ
ಪ್ರೀತಿಸು ನಿನ್ನ ನುಡಿಯ
ನಿನ್ನ ಭಾಷೆಯ
ನಿನ್ನದೇ ದೇಶವ
ನಿನ್ನದೇ ಧರ್ಮವ
ಮತ್ತಾರದೋ ಮುಖಗವಸು
ಹೊದ್ದು
ಮತ್ತಾರದೋ ಅತ್ತರಲಿ ಮಿಂದು
ನಿನ್ನ ನೀ ಮೋಸಗೊಳಿಸಿ ಕೊಳ್ಳುವ ಮೋಹ ಬಿಡು
ಆಗು ನೀ ಮನ ಮೋಹಕ
ಕನ್ನಡದ ನಿರೂಪಕ
ಕನ್ನಡದ ನಿರ್ವಾಹಕ
——————————-
ಡಾ ಡೋ.ನಾ.ವೆಂಕಟೇಶ
Bahala sundara vaagi barededdira
Dhanyavadagalu Anitha
Congratulations sir… Excellent.
Thanq very much
Beautiful
Thanq Sunitha
ಕನ್ನಡ ರಾಜೇತ್ಸವದ ಈ
ಶುಭದಿನದಲ್ಲಿ ನಿಮ್ಮ ಈ ಸುಂದರ ಕವಿತೆ ಕನ್ನಡಾಂಬೆಯ ಪಾದ ಕಮಲಗಳಿಗೆ
ಅರ್ಪಿಸುವ ನಿಮ್ಮ ಪ್ರಯತ್ನ ಶ್ಲಾಘನೀಯವಾಗಿದೆ. ನಿಮ್ಮ ಕನ್ನಡ ಭಾಷೆ,
ಸಂಸೃತಿ,ನಮ್ಮ ಹಿರಿಮೆಯಾಗಿದೆ.
ಕನ್ನಡ ರಾಜೇತ್ಸವದ ಈ
ಶುಭದಿನದಲ್ಲಿ ನಿಮ್ಮ ಈ ಸುಂದರ ಕವಿತೆ ಕನ್ನಡಾಂಬೆಯ ಪಾದ ಕಮಲಗಳಿಗೆ
ಅರ್ಪಿಸುವ ನಿಮ್ಮ ಪ್ರಯತ್ನ ಶ್ಲಾಘನೀಯವಾಗಿದೆ. ನಿಮ್ಮ ಕನ್ನಡ ಭಾಷೆ,
ಸಂಸೃತಿ,ನಮ್ಮ ಹಿರಿಮೆಯಾಗಿದೆ. M
ತುಂಬಾ ಧನ್ಯವಾದಗಳು ಸರ್