ಕಾವ್ಯ ಸಂಗಾತಿ
ಮಮತಾ ಕೆ
ದುಗುಡ ಮರೆಯಾಗಿದೆ
ಅವಿತು ಕುಳಿತಿಹ ಮನದ ಭಾವದ
ಕರಗಳ ಅಂದವ ನಾ ಹೇಗೆ ಅರಿಯಲಿ..
ರಂಗೋಲಿಯ ಓಕುಳಿ ಚೆಲ್ಲಿದ
ಹೆಂಗಳೆಯರ ಮನದ ಮುದದಿ
ಸೌಂದರ್ಯ ಲಹರಿಯು ನಿನ್ನ ರೂಪಕೆ
ಗಗನದಿ ಜನಿಸಿದ ರವಿಯ ಚೆಲುವಿಕೆ
ಮಂದಾರವಿದು ಎನ್ನ ಮನ ಸಾಕ್ಷಿ ಗೆ
ನೀ ಅವಿತಿರುವೆ ಚೆಲುವೆ ಬಣ್ಣದೊಳಗೆ
ಕರೆದಾಗ ಬರುವಿಯೆಂದು ಓಕುಳಿಯಾಟಕೆ
ಬರಲಿಲ್ಲ ಇನ್ನು ನಿನ್ನ ನನ್ನ ರಂಗಿನಾಟಕೆ
ಮನದ ಮೌನವ ಮುರಿದು ಬಿಡು ಚಿನ್ನಾ
ಹಟವ ತೊರೆದು ಬಾ ರಂಗಿನ ಮೆರವಣಿಗೆಗೆ
ನೀ ಬರುವ ದಾರಿಯಲಿ ಹೂವ ಚೆಲ್ಲಿದೆ
ಕಾಲಿನ ಗೆಜ್ಜೆಯ ನಾದಕೆ ಮನವರಳಿದೆ
ರಂಗಿನ ಬಣ್ಣದಲಿ ಹೂವಿನ ಮಳೆಸುರಿದಿದೆ
ಮನದ ದುಗುಡವು ಬಣ್ಣದಲಿ ಮರೆಯಾಗಿದೆ..
ಮಮತಾ ಕೆ