ಯೋಗೇಂದ್ರಚಾರ್ ಎ. ಎನ್ ನಿಶಾನೆಯ ಏರಿಸಲು ಹೊರಟವರು

ಕಾವ್ಯ ಸಂಗಾತಿ

ಯೋಗೇಂದ್ರಚಾರ್ ಎ. ಎನ್

ನಿಶಾನೆಯ ಏರಿಸಲು ಹೊರಟವರು

ನಿಶಾನೆಯ ಏರಿಸಲು ಹೊರಟವರು ಇವರು
ತಮ್ಮ ಧರ್ಮ ಪರಂಪರೆಯ ಗುರುತಿನ
ನಿಶಾನೆಯ ಏರಿಸಲು ಹೊರಟವರು ಇವರು

ಆ ಮುಗಿಲೇ ಕಳಚುವಷ್ಟು
ಪಾತಾಳ ಬಿರಿದು ಬಾಯ್ಬಿಡುವಷ್ಟು
ಹಕ್ಕಿ ಪಕ್ಕಿ ಕ್ರಿಮಿ ಕೀಟಗಳು ನಾಶವಾಗುವಷ್ಟು
ಕತ್ತಲೆಯ ಕರೆದು ಶೌರ್ಯದಿ
ನಿಶಾನೆಯ ಏರಿಸಲು ಹೊರಟವರು ಇವರು

ಇನ್ನೂ ಆರದ ಕರುಳ ಬಳ್ಳಿಯ ಕಿತ್ತು
ಮುಗ್ಧ ಮಕ್ಕಳ ನಗುವಿಗೆ ಕಿಚ್ಚನ್ನು ಇಟ್ಟು
ಪ್ರಕೃತಿಯೊಡಲ ಬೇರಿಗೇ ಬಂದೂಕು ಇಟ್ಟು
ಸ್ವರ್ಗದೂರಲ್ಲಿ ಯಮ ರಾಜನ
ನಿಶಾನೆಯ ಏರಿಸಲು ಹೊರಟವರು ಇವರು

ನಡು ರಸ್ತೆಯಲ್ಲೇ ಹೂ ಮಂಕರಂದ ಸವಿದು
ಪುಷ್ಪ ಪತ್ರೆಗಳ ಕಿತ್ತು ಬೆತ್ತಲಾಗಿಸಿ
ಶ್ರೇಷ್ಠ ಧರ್ಮದ ಅಂಗಿಯ ತೊಡಿಸಿ
ನಿಶಾನೆಯ ಏರಿಸಲು ಹೊರಟವರು ಇವರು


ಯೋಗೇಂದ್ರಾಚಾರ್ ಎ ಎನ್

Leave a Reply

Back To Top