ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಮಿಂಚಿ ಮಿಂಚಿ ಉದುರೊ ಹನಿ ಮಂಜಾಗಿಸೊ ಚಟವೇಕೆ ನಿಂಗೆ
ಹೊಳೆ ಹೊಳೆದು ಕವಿಯುವ ಕತ್ತಲಾಗಿಸೊ ಹಠಬೇಕೆ ಹಿಂಗೆ
ನೆನಪಿಂದ ನೊಂದು ಬಳಲಿದ ಎದೆಗಾಯಕೆಲ್ಲಿಯ ಔಷಧಿ
ನೋವಿಂದ ಬರೆದ ಕಥೆಯ ಮುಳ್ಳಾಗಿಸೊ ಚಟವೇಕೆ ನಿಂಗೆ
ಮನದಂಗಳ ಕದಡಿ ಕೆದಕಿದರೆ ಜೀವದಸಿರಿಗೆಲ್ಲಿ ನೆಮ್ಮದಿ
ಮಕರಂದ ಹೀರಿದ ರಸವ ವಿಷವಾಗಿಸೊ ಹಠವೇಕೆ ಹಿಂಗೆ
ತಂಪು ತಂಗಾಳಿ ಬೀಸೊ ಗಾಳಿಯಲಿ ಬೆಂಕಿ ಕಿಡಿ ಸಿಡಿಸುತಿರುವೆ
ಪ್ರೀತಿ ಕಂಗೊಳಿಸೊ ಹೃದಯ ಬನವ ಬರಡಾಗಿಸೊ ಚಟವೇಕೆ ನಿಂಗೆ
ಮಧುರ ಮಾತುಗಳ ಇರಿವ ಬಾಣದಂತಾಗಿಸಿ ಬಿಡದೆ ಬಿಡುತಿರುವೆ
ಓಡೊ ಮೋಡದಂತೆ ಸಾಗುವ ಒಲವ ಮರಿಗಿಸೊ ಹಠವೇಕೆ ಹಿಂಗೆ
ನವಿರಾದ ನೋಟದ ಕಣ್ಣಲಿಯಲಿ ಧೂಳು ತುಂಬಿಸಿದರೆಲ್ಲಿ ಹರುಷ
ನೀರ ತೊರೆಯಂತೆ ಹರಿವ ಪ್ರೇಮ ನಂಜಾಗಿಸೋ ಚಟವೇಕೆ ನಿಂಗೆ
ಮುದ್ದು ಮೊಲದಂತಹ ಅನುಳ ಭಾವ ಬತ್ತಿಸಿದರೆಲ್ಲಿಯ ಸಂತಸವು
ಗರಿಬಿಚ್ಚಿ ನವಿಲಂತೆ ಕುಣಿವ ಸರಸಸಲ್ಲಾಪ ಸೊರಗಿಸೊ ಹಠವೇಕೆ ಹಿಂಗೆ
ಡಾ ಅನ್ನಪೂರ್ಣ ಹಿರೇಮಠ