ಲಕ್ಷ್ಮೀ ಕಾಯಕದ ಕವಿತೆ ಆಲಾಪನೆ

ಕಾವ್ಯ ಸಂಗಾತಿ

ಲಕ್ಷ್ಮೀ ಕಾಯಕದ

ಆಲಾಪನೆ

ಆತ್ಮದ ಅಲಾಪನೆ
ಆತ್ಮವು ನೋಯು ತಿದೆ
ಸಾವಿರ ಸವಿ ನೆನಪುಗಳ
ಮುಂದಿಕ್ಕಿ

ಬಯಸಿದೆ ಏನೇನೋ
ಒಲವಿನ ಆಸರೆ
ಕನಸುಗಳ ಮುಂದಿಕ್ಕಿ

ಇರುಳುಗಟ್ಟಳೆಯಲ್ಲಿ
ಮನಸುಗಳ ಹುಡುಕಾಟ
ಬಯಕೆಗಳ ಮುಂದಿಕ್ಕಿ

ಪಿಸು ಮಾತಿನಲಿ
ಹೊಸ ಕಳೆ ಕಟ್ಟಿದೇ
ಸರಸವನು ಮುಂದಿಕ್ಕಿ

ದೊರಕುವದು ಎಂಬ
ಹೆಬ್ಬಾಯಕೆ ಆತ್ಮಕ್ಕೆ
ಅಲಾಪನೆ ಮುಂದಿಕ್ಕಿ


ಲಕ್ಷ್ಮೀ ಕಾಯಕದ

Leave a Reply

Back To Top