ಕಾವ್ಯ ಸಂಗಾತಿ
ಡಾ.ಜಿ.ಪಿ.ಕುಸುಮಾ ಕವಿತೆ
ಭಾವ ಬತ್ತಿ ಹೋಗದಿರಲಿ
ಗುಟುಕು ಗುಟುಕು
ಹೀರಿ ಚಹಾದ ಮಜಾ
ಗಳಿಸರೋ
ಯಾರೂ ಅರಿಯರಿಹದ
ಸಂತೆಯೊಳಗ ಬಲ್ಲಿರೋ
ಬಾಳ ಕದವ ಮುಚ್ಚಿ
ಮುಂದೆ ಹೋಗೋರೆಲ್ಲರು….
ಚಿನ್ನ, ಮಣ್ಣು, ಕಾಸು ದಾಹ
ತೀರದೆಂದಿಗೂ
ಕಳೆದ ಕ್ಷಣವು ಮರಳಿ ಮತ್ತೆ
ಬಾರದೆಂದಿಗೂ
ಗಟುಕು ಗುಟುಕು
ಹೀರಿ ಚಹಾದ
ಮಜಾ ಗಳಿಸಿರೋ
ಕೆಲಸವೆಷ್ಟು ರಾಶಿ ರಾಶಿ
ಮುಗಿಯದೆಂದಿಗೂ
ಸಂತಸವ ಅರಸಿಯರಸಿ
ಬಾಳ ಕಳೆವೆವು…..
ಸಂಭ್ರಮಿಸಿ ಸ್ನೇಹದಲ್ಲಿ
ಹೃದಯ ತುಂಬಿ ಬರಲಿ ಕರುಣೆ
ಮನಸ್ಸು ಮನಸ್ಸುಗಳನು ಬೆಸೆವ
ಭಾವ ಬತ್ತಿ ಹೋಗದಿರಲಿ
ಗುಟುಕು ಗುಟುಕು
ಹೀರಿ ಚಹಾದ
ಮಜಾ ಗಳಿಸಿರೋ.
ಡಾ.ಜಿ.ಪಿ.ಕುಸುಮಾ