ಕಾವ್ಯ ಸಂಗಾತಿ
ಡಾ.ಸರೋಜಾ ಜಾಧವ
ಸೀಮಂತದ ಸಂಭ್ರಮ
ಇಳೆಗೆಷ್ಟು ಖುಷಿ
ವರುಣನ ಸಾನ್ನಿಧ್ಯ ಆ ಬಿಸಿ
ಉಸಿರಿಗೆ ಹಸಿರಾಗಿ ಮುಸಿ
ನಗುತಿಹಳೋ ಎಂಬಂತೆ ಹಸಿ
ರುಟ್ಟು ಕೆಂದಾವರೆ ಮುಡಿದು ಹುಸಿ
ಮುನಿಸು ನಸು ನಾಚಿಕೆಯಿಂದರಳಿದ
ಹೂವಿಂದ ಹೀರುತ್ತಾ ಮಕರಂದ
ಝೇಂಕರಿಪ ದೂಂಬಿಗಳಾನಂದ
ಕೆಸರೆಂಬುದ ಲೆಕ್ಕಿಸದೆ ಅರಳಿ
ಬಿರಿದ ತಾವರೆಯ ಪರಮಾನಂದ
ಚೊಚ್ಚಿಲ ಬಸಿರಿ ಭೂರಮೆಗೆ
ಉಡಿತುಂಬಿ ಸಂಭ್ರಮದ ನಗೆ
ನಕ್ಕಂತೆ ಫಳಿರೆಂದು ಮಿಂಚು
ಮಿಂಚಿ ಗುಡುಗೆಂಬ ವಾಧ್ಯ
ಮಂಗಲಗೀತೆ ಫಲ ಪುಷ್ಪ ನ್ಯೈವೇದ್ಯ
ಮಾಮರ ತಳಿರು ತೋರಣ
ಧರಿತ್ರಿಗೆ ಸೀಮಂತದ ಸಂಭ್ರಮ
ಡಾ ಸರೋಜಾ ಜಾಧವ
Excellent poem
Dr Shashikant Pattan Pune
Beautiful Dr Saroja