ಲಲಿತಾ ಕ್ಯಾಸನ್ನವರ-ಮೌನರಾಗ ಹೊಸದಾಗಿದೆ…..

ಸಂಗಾತಿ ವಾರ್ಷಿಕ ವಿಶೇಷಾಂಕ

ಲಲಿತಾ ಕ್ಯಾಸನ್ನವರ

ಮೌನರಾಗ ಹೊಸದಾಗಿದೆ…..

ಮನದಾಳದಲಿ ಮೂಡಿಬಂದಿದೆ ಹೊಸರಾಗ
ಪಿಸುಗುಟ್ಟುತಲಿ ಉಲಿಯುತಲಿದೆ ಮೌನರಾಗ

ಬಾಳಿನಾ ತೋಟದಲಿ ಅರಳಿದ ಹೂವು
ಘಮ್ಮೆಂದು ಸೂಸುತಿದೆ ತನದೆ ಸುವಾಸನೆ
ಬಾಡುವೆನೆಂದು ಹೇಳುವುದಿಲ್ಲ ಎಂದೂ
ಇರುವಷ್ಟು ಸಮಯ ಖುಷಿ ನೀಡುವುದು ಕಾಣಾ

ಕಳೆದಾ ಸಮಯಾ‌ ಕಂಡಾ ಕನಸು
ಮರೀಚಿಕೆಯಾಗಿ ನಿಂತಿದೆಯಲ್ಲಾ
ಮನದಾಳದ ಮಾತು ಹ್ರುದಯದಾ ತುಡಿತ
ಮೌನವಾಗಿ ಬಿಕ್ಕಳಿಸುತಿದೆಯಲ್ಲಾ..

ಕತ್ತಲಾವರಿಸಿದ ಮನಕೆ ಮುದ ನೀಡದು ಬಯಕೆ
ಹೊಸತು ಹಳೆಯದರ ಭರಾಟೆಯಲಿ
ಬಾಳಬಂಡಿ ಕೀಲಿಮಣಿ ಕಳಚಿಬಿದ್ದಿತು…
ಒಡೆದು ಹೋಯಿತು ಬದುಕು.. ..

ಹೊಸದಾಗಿ ಹೊಸರಾಗ ಮೂಡುತಲೆ
ಮೌನರಾಗ ಮೌನವಾಗಿಯೇ ರೋದಿಸುತಲೇ ಇದೆ‌ ಇನ್ನೂತನಕ….

—————-

ಲಲಿತಾ ಕ್ಯಾಸನ್ನವರ.

One thought on “ಲಲಿತಾ ಕ್ಯಾಸನ್ನವರ-ಮೌನರಾಗ ಹೊಸದಾಗಿದೆ…..

  1. ಟೀಚರ್, ರೋಧಿಸುವುದು ಮುಗಿದಿದೆ ಮತ್ತೇಕೆ ರೋಧನೆ

Leave a Reply

Back To Top