ಕಾವ್ಯ ಸಂಗಾತಿ
ದೇವಿದಾಸ ನಾಯಕ ಅಗಸೂರು-
ಶೂನ್ಯ.
ವಿಧಿಯೆ ನಿನ್ನ ಲೀಲೆ ವಿಚಿತ್ರ
ಹೀಗೆ ಬಂದು ಹಾಗೆಯೆ ಹೋದರೆ
ಇದೊಂದು ಬದುಕು ಎನಿಸದು
ಈಗಾಗಲೆ ಬಿದ್ದಿದೆ ನಿನ್ನ ಬರಹದ ಬರೆ
ಯಾರೆಷ್ಟೇ ಆಲೋಚಿಸಿ ನಡೆದರೂ
ನೀ ಬರೆದ ಬದುಕಿನ ಪುಟಗಳು
ಒಂದೊಂದೆ ಕಾರ್ಯ ನಡೆಸಲೇಬೇಕು
ಅದರಂತೆ ಮೂಡುವುವು ಹೆಜ್ಜೆಗಳು
ಈ ಆಗುಹೋಗುಗಳು ಯಾರಿಂದ?
ಹುಟ್ಟುವಾಗ್ಲೆ ಪ್ರಕಟಗೊಂಡಿದೆ ಪುಸ್ತಕ
‘ವಿಧಿಬರಹ’ಶಿರ್ಷಿಕೆ,ಅದರದೆ ಆಟ
ಇರುವಷ್ಟು ಕಾಲ ಸೃಷ್ಟಿಸುವುದು ನಾಕ ನರಕ
ಇಳೆಗಿಳಿದ ಮನುಜ ನಿಮ್ಮಿತ್ತ ಮಾತ್ರ
ಒಬ್ಬೊಬ್ಬರ ವಿಷಯ ಒಂದೊಂದು ತರಹ
ಹೀಗಿರಲು ಒಬ್ಬ ಮಾನ್ಯ,ಇನ್ನೊಬ್ಬ ಶೂನ್ಯ
ಕೆಲವರಿಗೆ ಮೋಹ,ಹಲವರಿಗೆ ದಾಹ
ಬಂದ ಸಮಯ ಮುಗಿದು ಮಲಗಿದಾಗ
ಆಡುವರ ಮಾತಿಗೆ ಎರಡು ಕಿವಿ ಸಾಲದು
ಎಲ್ರು ಹೇಳ್ತಾರೆ ವಿಧಿಯಾಟ ಬಂದ ಹೋದ
ನಮ್ಮಿಂದೇನೂ ನಡೆಯದು ಎಲ್ಲ ಅವನದು..!
ದೇವಿದಾಸ ನಾಯಕ ಅಗಸೂರು-
ಬದುಕು ಹಲವಾರು ಆಕಸ್ಮಿಕ ತಿರುಗಳನ್ನು,ನೇರ, ಘಾಟ್ ಸೆಕ್ಷನ್ ಗಳನ್ನು ಹೊಂದಿರುವಂತದ್ದು..
ಅದು ಕೆಲವೊಮ್ಮೆ ತಾನೇ ಆ ಕ್ಷಣ ಬರೆಯುತ್ತದೆ.ಮೊದಲೇ ಬರೆದ ಕಥೆಗೆ ಷರಾ ಬರೆಯುತ್ತದೆ.ಅವನ ನಾವು ವಿಧಿ ಲಿಖಿತ ಅಂತೇವೆ. ಒಟ್ಟಿನಲ್ಲಿ ಅದನ್ನು ಅನುಭಿಸಿ ಎದುರಿಸಬೇಕು..
ಆಗಲೇ ಅದಕ್ಕೊಂದು ಕನ್ಕ್ಲೂಷನ್ ಸಿಗುವುದು..
ಇದನ್ನು ಪ್ರತಿನಿಧಿಸಿದಂತಿದೆ ಕವಿತೆ..
ಧನ್ಯವಾದಗಳು ಸರ್
ಈ ಕ್ಷಣವರ್ತಿಯಾದ ಬದು
ಈ ಕ್ಷಣವರ್ತಿಯಾದ ಬದುಕಿನಲ್ಲಿ ನಾವು ಪ್ರತಿಯೊಂದು ಕ್ಷಣವನ್ನು ವೈಭವಪೂರ್ಣವಾಗಿ ಕಳೆಯಬೇಕು. ಅದು ಸಾರ್ಥಕ ಬದುಕು.
ಕ್ಷಣಿಕ ಜೀವವ ಕ್ಷಣ ಕ್ಷಣವು ಜೀವಿಸುತ ಸ್ವಾರ್ಥಿಯಾಗದೆ ಒಂದಿಷ್ಟು ಕರುಣೆ ಪ್ರೀತಿ ಅನುಕಂಪ ಮೆರೆದು ಸಾರ್ಥಕ ಬದುಕು ಸಾಗಿಸುವ ಕವಿತೆಯ ಸಾರ ಉತ್ತಮವಾಗಿದೆ.
ನೈಜತೆಯ ಅನಾವರಣ ಭಗವಂತನ ಸೃಷ್ಟಿ ಬೇಧಿಸಲು ಯಾರಿಂದು ಆಗಿಲ್ಲ,ನಾವು ನೆಪಮಾತ್ರ ಬದುಕಿನುದ್ದಕ್ಕೂ ಒಂದಲ್ಲ ಒಂದು ವೇದನೆಗಳ ಅವಹಾಲುಗಳನ್ನು ದೇವರ ಮುಂದೆ ಇಟ್ಟು ಬೇಡುತ್ತೆವೆ.ನಾನು ನನ್ನಿಂದ ಎಂಬ ಅಹಂ ನಲ್ಲಿ ಬೇರು ಬಿಟ್ಟು ಕುಣಿದಾಡುತ್ತೆವೆ.ಕಣ್ಮುಚ್ಚುವ ವೇಳೆಗೆ ಯಾರ ಹಂಗು ಇಲ್ಲದೆ ಶೂನ್ಯದತ್ತ ಜಾರಿಬಿಡುತ್ತೆವೆ.ಎಂಥಹ ವಿಪರ್ಯಾಸ! ಕವಿತೆಯ ಭಾವಾರ್ಥ ವಿಧಿ ಲಿಖಿತದ ಮುಂದೆ ಬೇರೆನಿಲ್ಲ…ಸ್ನೇಹ ಬಾಂಧವ್ಯ ಉಳಿಸಿ ಜೀವಿತಾವಧಿಯ ಸಾರ್ಥಕ ಮಾಡಿದರೆ ಒಳಿತೆಂಬ ಆಶಯ ಮೆಚ್ಚುವಂಥಹುದು…ಅಭಿನಂದನೆಗಳು ಸರ್