ಲಕ್ಷ್ಮಿ ಕಾಯಕದ ಕವಿತೆ-ದೊಡ್ಡವನೆ!

ಕಾವ್ಯ ಸಂಗಾತಿ

ಲಕ್ಷ್ಮಿ ಕಾಯಕದ

ದೊಡ್ಡವನೆ!

ಬೌದ್ದಿಕತೆಯ ಬುದ್ದಿ
ಹೇಳಿದ
ಬುದ್ದ
ದೊಡ್ದವನೇ

ಬದುಕಿಗೆ ಭಾವ
ತುಂಬಿದ
ಬಸವಣ್ಣ
ದೊಡ್ದವನೇ

ಆತ್ಮದ ಮಹಾಂತ
ಹೇಳಿ ಕೊಟ್ಟವ
ಮಹಾವೀರ
ದೊಡ್ದವನೇ

ಮತಗಳಲ್ಲಿ ಸಹಮತ
ಭೋದಿಸಿದ
ಮಹಮ್ಮದ
ದೊಡ್ದವನೇ

ಪ್ರೀತಿಯ ಹಿರಿಮೆ
ಹೇಳಿದ
ಏಸುದೇವ
ದೊಡ್ದವನೇ

ಶಿಷ್ಟಾಚಾರ
ಕಲಿಸಿ
ಗುರುನಾನಕ್
ದೊಡ್ದವನೇ

ಎಲ್ಲರೂ ದೊಡ್ದವರೆ
ಮತ್ತು
ಸಮಾನತೆಯ ಹರಿಕಾರರೆ
ಅಲ್ಲವೇ

ಹೇಳಿ
ನೀವು
ತಿಳಿದವರೆ


ಲಕ್ಷ್ಮಿ ಕಾಯಕದ

Leave a Reply

Back To Top