ಕಾವ್ಯಸಂಗಾತಿ
ಇಂದಿರಾ ಮೋಟೆಬೆನ್ನೂರ.
ಗಜಲ್
ಎದೆಯ ಇರಿದು ಉಸಿರೆಂದರೆ ಸಾಧ್ಯವೇ ಹೇಳು
ಮನವ ಮುರಿದು ನಗುವೆಂದರೆ ಸಾಧ್ಯವೇ ಹೇಳು
ನೆನಪ ಅಳಿಸಿ ನಲಿಯೆಂದರೆ ಸಾಧ್ಯವೇ ಹೇಳು
ಕನಸ ಉರಿಸಿ ಉಲಿಯೆಂದರೆ ಸಾಧ್ಯವೇ ಹೇಳು
ಕೊರಳ ಹುಗಿದು ಹಾಡೆಂದರೆ ಸಾಧ್ಯವೇ ಹೇಳು
ಮೊಗ್ಗನು ಹಿಸುಕಿ ಅರಳೆಂದರೆ ಸಾಧ್ಯವೇ ಹೇಳು
ಒಲವ ತುಳಿದು ನಡೆಯೆಂದರೆ ಸಾಧ್ಯವೇ ಹೇಳು
ತುಟಿಯ ಹೊಲಿದು ನುಡಿಯೆಂದರೆ ಸಾಧ್ಯವೇ ಹೇಳು
ರೆಕ್ಕೆ ತರಿದು ಹಕ್ಕಿಯಾಗಿ ಹಾರೆಂದರೆ ಸಾಧ್ಯವೇ ಹೇಳು
ಶಶಿ ಇರದೆ ಬೆಳದಿಂಗಳಲಿ ಇಂದು ಬದುಕೆಂದರೆ ಸಾಧ್ಯವೇ ಹೇಳು
ಇಂದಿರಾ ಮೋಟೆಬೆನ್ನೂರ.