ಕಾವ್ಯ ಸಂಗಾತಿ
ಹುಳಿಯಾರ್ ಷಬ್ಬೀರ್
ತನಗಗಳು…
1
ತಾಕಲಾಟದ ಭಾವ
ಭಾವನೆಗಳು ಜೀವ
ಅಡ್ಡಿ ಆತಂಕ ಬೊಕ್ಕೆ
ಒಳಗೊಳಗೆ ಕೊಕ್ಕೆ.
2
ನನ್ನವಳ ಚೆಲುವು
ಜೀವನವೇ ಒಲವು
ಪ್ರತಿಕ್ಷಣವೂ ಖುಷಿ
ನಾನು ಖುಷಿಯ ಋಷಿ.
3
ಹುಣ್ಣಿಮೆಯ ಚಂದಿರ
ರಾತ್ರಿಯಲಿ ನಕ್ಕಂತೆ
ಚುಕ್ಕಿಗಳು ಸುಂದರ
ಗಗನವೇ ಹೊಕ್ಕಂತೆ.
4
ಸೋತಿದ್ದು ಮನಸ್ಸಲ್ಲ
ಮುಂದಿನವ ಗೆದ್ದಿದ್ದು
ಗುರಿಯು ಸಡಲಿಲ್ಲ
ಪ್ರಯತ್ನ ಛಲದದ್ದು.
5
ನನ್ನೊಡನೆ ಇದ್ದಷ್ಟು
ಒಲವೇ ನಾಚಿದಂತೆ
ನೀ ಹೋದ ಮೇಲಷ್ಟೇ
ಮೌನವೇ ರಾಚಿದಂತೆ.
ಹುಳಿಯಾರ್ ಷಬ್ಬೀರ್
ತನಗಗಳು ಅತ್ಯುತ್ತಮವಾಗಿವೆ ಶಬೀರ್ ಸರ್ ಇನ್ನಷ್ಟು ತನಗಗಳು ಹರಿದು ಬರಲಿ