ಕಾವ್ಯಸಂಗಾತಿ
ಅಕ್ಕಮಹಾದೇವಿ
ಹೆಜ್ಜೆಗುರುತು
ಮಾನವ ಜನ್ಮ ದೊಡ್ಡದು
ಹುಟ್ಟಿದ ನಂತರ
ನೆನಪು ಉಳಿವಂತೆ
ಸಾಧಿಸಬೇಕು
ಸತ್ತರೂ ಬದುಕಿರುವಂತೆ
ಹೆಜ್ಜೆ ಗುರುತು
ಬಾಳಿನಲ್ಲಿ ಬಹು ಮುಖ್ಯ.
ಶಿವಶರಣರೆಲ್ಲರೂ
ತಮ್ಮ ಹೆಜ್ಜೆ ಗುರುತಿನ ಛಾಪು ಮೂಡಿಸಿರುವರು
ಅವರ ಸನ್ಮಾರ್ಗದಲ್ಲಿ
ನಾವು ನಡೆಯೋಣ.
ಬುದ್ಧ ಬಸವ ಗಾಂಧಿ
ಅವರ ಹೆಜ್ಜೆ ಗುರುತು ಅಚ್ಚಳಿಯದೆ ಉಳಿದಿವೆ.
ಶಾಶ್ವತವಾದ ನಮ್ಮ ಹೆಜ್ಜೆ ಗುರುತು ಇದ್ದರೆ
ಬದುಕಿಗೆ ಒಂದು ಬೆಲೆ
ಇಲ್ಲವಾದರೆ ಎಲ್ಲಿದೆ
ನೆಲೆ..?
ಅಕ್ಕಮಹಾದೇವಿ
Nice doddamma
Tqs .Preeti..
ಸೂಪರ್ಕ ಕವನ