ಕಾವ್ಯ ಸಂಗಾತಿ
ಡಾ.ಕಸ್ತೂರಿ ದಳವಾಯಿ.
ಮೌನ ಮುರಿದ ಭಾವ
ಮೌನ ಮುರಿದ
ಭಾವದಿಂದ.
ಬುದ್ದ ಸಿದ್ದಾರ್ಥನಾಗಿ
ಲೋಕಕ್ಕೆ.
ನೀಡಿದ ಸಂದೇಶಗಳನ್ನು
ಸಹಿಸಿಕೂಳ್ಳಲಾಗಲಿಲ್ಲಾ.
ನಲಂದಾದ ವಿಶ್ವವಿದ್ಯಾಲಯ
ಸುಟ್ಟುಹಾಕುತ್ತಿರಲಿಲ್ಲ.
ಮತೆ ಮೌನ ಮುರಿದ
ಭಾವದಲ್ಲಿ ಬಸವ ಅಕ್ಕ ನಾಗಲಾಂಬಿಕೆಯೂಂದಿಗೆ
ಸಮ ಸಮಾಜದ ದಾಂಗುಡಿಯ ದಿಟ್ಟ ಸಮಸ್ಯೆಗಳನ್ನು ಕೀಳಲು
ಆಗುತ್ತರಲಿಲ್ಲಾ,!!!!
ಮೌನ ಮುರಿದ
ಭಾವದಲ್ಲಿಯೇ ಇತಿಹಾಸದ
ಪುಟಗಳಲ್ಲಿ ಮೊದಲ
ಯೋಗಾಂಗ ತ್ರಿವಿದೆ.ಶಕ್ತಿ .
ಅಕ್ಕ ರಾಜಪ್ರಭುತ್ವದ ಹನ್ನೆರಡನೆಯ ಶತಮಾನದ
ಕೌಶಿಕನನ್ನು ದಿಕ್ಕರಿಸಿ ಮಹಿಳಾ
ಜಗತ್ತಿನ
ಮಾಣಿಕ್ಯವಾಗಿದ್ದಲ್ಲವೇ.!
ಮತ್ತೆ ಮೌನ ಮುರಿದ
ಭಾವದಲ್ಲಿ. ಬ್ರಿಟಿಷ್ ಹುಟ್ಟಡಗಿಸಿದ ಸ್ವತಂತ್ರ ಸೌಧಾಮಿನಿ ಚನ್ನಮ್ಮನ
ಕೆಚ್ಚೆದೆಯ ಹೋರಾಟದ ದ್ವನಿ
ನಮಗೆ ಪ್ರೇರಣೆ ಯಾಯಿತ್ತು ನೋಡಾ!
ಮತ್ತೆ ಮೌನ ಮುರಿದ
ಭಾವದಲ್ಲಿ ಬಲಗೈ ಬಂಟ
ಸಂಗೊಳ್ಳಿ ರಾಯಣ್ಣನ
ಭಾರತಂಬೆಯ
ಮಾನ.ಸಮ್ಮಾನ
ಸ್ವಾಭಿಮಾನದ ದಳ್ಳುರಿ ನಮಗೆ
ಮಾದರಿಯೆನ್ನಲೇ.
ಮತ್ತೆ ಮೌನ ಮುರಿದ
ಭಾವದಲ್ಲಿ.ಭೀಮರಾವ್ರವರಿಗೆ
ಸಂವಿಧಾನದ ಬರೆದು ನಾವೆಲ್ಲಾ.ಪ್ರೇಮ.ಸಮಾನತೆ
ಸಹಾಯ.ಸಹಕಾರದಿಂದರಿರಲು.ದಾರಿಯಾಯಿತು.!
ಮತ್ತೆ ಮೌನ ಮುರಿದಭಾವದಲ್ಲಿ
ಮಾತು ಮಾತು ಮಥಿಸಿ
ಬಂದ .ನವನೀತ (ಬೆಣ್ಣೆಯಂತಹ} ಭಾವದಲ್ಲಿ.
ಕವನ ಹುಟ್ಟಿತ್ತು.ಸಹೃದಯ ಕ್ಕೆ.
ಮತ್ತೆ ಮೌನ ಮುರಿದು ಎದೆ
ಸೆಟೆದು ನಿಲ್ಲೋಣ
ಸಂದುಗಳಲ್ಲಿರುವ.
ಮೌಡ್ಯತೆ.ಅಜ್ಞಾನ. ಕಂದಾಚಾರ.ಜಾತಿ ಸಂಕರಗಳನ್ನು ಕಿತ್ತೊಗೆದು ಬಿಡೋಣ…
ಡಾ.ಕಸ್ತೂರಿ ದಳವಾಯಿ