ಎನ್.ನಾಗೇಶ್ಅವರ ಅವತಾರ್ ಸರಣಿಯ ಕಲಾಕೃತಿಗಳ ಪರಿಚಯ ಗೊರೂರು ಅನಂತರಾಜು

ಕಾವ್ಯಸಂಗಾತಿ

ಎನ್.ನಾಗೇಶ್ ಅವರ

ಅವತಾರ್ ಸರಣಿಯ ಕಲಾಕೃತಿಗಳ

ಪರಿಚಯ

ಗೊರೂರು ಅನಂತರಾಜು

ಹಾಸನದ ನಿರ್ಮಲ ಚಿತ್ರಕಲೆ ಶಾಲೆಯ ಉಪನ್ಯಾಸಕರಾದ ಎನ್.ನಾಗೇಶ್ ಅವರು ಚಿತ್ರಕಲೆಯಲ್ಲಿ ಎಲೆ ಮರೆ ಕಾಯಿಯಂತೆ ಇದ್ದರೂ ಇವರು ತಮ್ಮ ಕಲಾಕೃತಿಗಳಿಂದ ಪ್ರೌಢಿಮೆಯನ್ನು ತೋರಿದ್ದಾರೆ. ಚಿತ್ರಕಲೆ ವ್ಯಾಸಂಗದಲ್ಲಿ ಎ.ಎಂ. ಜಿ.ಡಿ. ಮಾಡಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಎಂ.ವಿ.ಎ. ಪದವಿಯನ್ನು
ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದು ಹಾಲಿ ನಿರ್ಮಲಾ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಚಿತ್ರಕಲಾ ಪದವಿ ತರಗತಿಗಳಿಗೆ ಚಿತ್ರಕಲಾ ಉಪನ್ಯಾಸಕರಾಗಿ ತಾವು ಕಲಿತ ಕಲಾ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ಜೊತೆಗೆ, ಚಿತ್ರಕಲಾ ತರಗತಿಗಳಲ್ಲಿ ಪ್ರಾತ್ಯಕ್ಷಿಕೆಗಳ ಮುಖೇನ ಮನದಟ್ಟು ಮಾಡಿಸಿದ್ದಾರೆ.
ಇವರ ನವ್ಯ ರಚನೆಯ ಅವತಾರ್ ಸರಣಿ ಚಿತ್ರಗಳು ತೈಲವರ್ಣದಲ್ಲಿ ಕ್ಯಾನ್ವಾಸ್ ಮೇಲೆ ಚಿಂತನೆಯ ಮೂಡ್‌ನಲ್ಲಿ ಮೂಡಿಬಂದ ಕಲಾಕೃತಿಗಳಾಗಿವೆ. ಮನುಷ್ಯ ತನ್ನ ಭ್ರಮಾಲೋಕವನ್ನು ಮೀರಿ ಭಾವನಾತ್ಮಕ ಜಗತ್ತಿನಲ್ಲಿ ರೋಮಾಂಚನದ ಕ್ಷಣಗಳನ್ನು, ಭ್ರಮೆಯ ವಿಸ್ಮಯವನ್ನು ವಿಚಲಿತವಾದ ಮನಸ್ಸಿನ ವೇಗವನ್ನು ಕಲಾವಿದನೊಬ್ಬ ತನ್ನ ಚಿಂತನೆಗಳಿಂದ ರೂಪು ಕೊಡಬಹುದೆಂದನ್ನು ತೋರಿಸಿದ್ದಾರೆ. ಇವರ ಲೈಫ್ ಶೀರ್ಷಿಕೆ ಕಲಾಕೃತಿಗಳಲ್ಲಿ ನೈಜತೆ ಹಾಗೂ ಸಂಸ್ಕೃತಿ, ನೈಜತೆ ಹಾಗೂ ಸ್ಥಿರ ವಸ್ತುಗಳು ಹಾಗೂ ಜೀವ ನಿರ್ಜೀವ ವಸ್ತುಗಳನ್ನು ಬಳಸಿಕೊಂಡು ಜಾನಪದ ಸೊಗಡನ್ನು ಮೈವಡಿಸಿಕೊಂಡು ವೈವಿಧ್ಯ ಕಲಾಕೃತಿಗಳನ್ನು ರಚಿಸಿದ್ದಾರೆ. ದೃಶ್ಯ ಅದೃಶ್ಯಗಳನ್ನು ಸಮ್ಮಿಳಿತಗೊಳಿಸಿ, ಶೀರ್ಷಿಕೆ ರಹಿತ ಅನೇಕ ನವ್ಯ ರಚನೆಗಳು ಚಿಂತನೆಗೆ ಹಚ್ಚುತ್ತವೆ.


ಜಲವರ್ಣ ತೈಲವರ್ಣ,ಅಕ್ರಾಲಿಕ್ ವರ್ಣ, ಭಾವಚಿತ್ರ, ಪ್ರಕೃತಿ ಚಿತ್ರ ಕ್ಲೇ ಮಾಡಲಿಂಗ್ ಹೀಗೆ ಚಿತ್ರಕಲೆಯ ಹಲವು ಪ್ರಕಾರಗಳನ್ನು ಕರಗತ ಮಾಡಿಕೊಳ್ಳುವಲ್ಲಿ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಇವರ ಕಲಾಕೃತಿಗಳು ಅನೇಕ ಕಲಾಸಕ್ತರ ಮನೆಗಳಲ್ಲಿ ಸಂಗ್ರಹಗೊAಡಿದೆ. ಹೊರದೇಶಗಳ ಚಿತ್ರ ಪ್ರೇಮಿಗಳು ಇವರ ಕಲಾಕೃತಿಗಳನ್ನು ತಮ್ಮ ಮನೆಗಳಲ್ಲಿ ಸಂಗ್ರಹಿಸಿಟ್ಟು ಕೊಂಡಿದ್ದಾರೆ. ನಾಗರನವಿಲೆಯ ನಾಗೇಶ್‌ರವರು ಹುಟ್ಟಿದ್ದು ೨೦-೭-೧೯೬೭ ರಲ್ಲಿ ಇವರ ತಂದೆ ಎನ್. ಲಕ್ಷ್ಮಿನಾರಾಯಣಪ್ಪನವರು. ನಾಗೇಶ್‌ರವರು ತಮ್ಮ ಕಲಾಕೃತಿಗಳನ್ನು ಲಲಿತಾಕಲಾ ಅಕಾಡೆಮಿಯ ೧೯೮೬,೮೭,೮೮, ೨೦೦೦ ರ ವಾರ್ಷಿಕ ಸಮ್ಮೇಳನದಲ್ಲಿ ಪ್ರದರ್ಶಿಸಿದ್ದಾರೆ. ೧೯೮೯, ೯೦ ಮತ್ತು ೯೧ ರಲ್ಲಿ ಅಖಿಲ ಭಾರತ ಮೈಸೂರು ದಸರಾ ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ೧೯೯೦ರಲ್ಲಿ ಮಂಗಳೂರಿನಲ್ಲಿ ಸಮೂಹ ಚಿತ್ರ ಪ್ರದರ್ಶನದಲ್ಲಿ, ೧೯೯೧ ರಲ್ಲಿ ಶ್ರೀ ಮಂಜುನಾಥೇಶ್ವರ ಕಾಲೇಜಿನ ಸಿಲ್ವರ್ ಜೂಬಿಲಿ ಕಾಠ್ಯಕ್ರಮದಲ್ಲಿ (ಉಜಿರೆ) ಸಮೂಹ ಕಲಾ ಪ್ರದರ್ಶನದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಬೇಲೂರು, ಸಕಲೇಶಪುರ
ಕನ್ನಡ ಸಾಹಿತ್ಯ ಸಮ್ಮೇಳನ ಗ್ರೂಪ್‌ಶೋ, ನಾಗಪುರದ ದಕ್ಷಿಣ ಮಧ್ಯ ವಲಯ ಕಲ್ಟರ್ ಸೆಂಟರ್‌ನಲ್ಲಿ ೧೯೯೩ ರಲ್ಲಿ ಸಮೂಹ ಪ್ರದರ್ಶನದಲ್ಲಿ ಭಾಗಿಗಳಾಗಿದ್ದಾರೆ. ಮಂಡ್ಯದಲ್ಲಿ ರಾಜ್ಯಮಟ್ಟದ ಚಿತ್ರ ಪ್ರದರ್ಶನದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ೧೯೯೯ ರಲ್ಲಿ ಹಾಸನ ಜಿಲ್ಲಾಡಳಿತ ಏರ್ಪಡಿಸಿದ ಹೊಯ್ಸಳ ಮಹೋತ್ಸವದಲ್ಲಿ, ಖ್ಯಾತ ಚಿತ್ರಕಾರರಾದ ಕೆ.ಟಿ. ಶಿವಪ್ರಸಾದ್ ಸಂಘಟಿಸಿದ್ದ ಬಣ್ಣ ಬೆಡಗು ಸಮೂಹ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಚಿತ್ರಸಂತೆ, ಧಾರವಾಡ ಚಿತ್ರಕಲಾವಿದರ ಗ್ರೂಪಗಳಲ್ಲಿ ಭಾಗವಹಿಸಿರುವ ನಾಗೇಶ್ ತಮ್ಮದೇ ಏಕವ್ಯಕ್ತಿ ಕಲಾ ಪ್ರದರ್ಶನ ಏರ್ಪಡಿಸಬೇಕೆಂದು ಆಕಾಂಕ್ಷೆ ವ್ಯಕ್ತಪಡಿಸುತ್ತಾರೆ. ಈ ವಷ೯ ಮಕ್ಕಳಿಗೆ ಗಣೇಶನ ಹಬ್ಬಕ್ಕೆ ಗಣೇಶ ಮೂತಿ೯ಯನ್ನು
ಮಾಡುವುದನ್ನು ಕಲಿಸಿಕೊಡುವಲ್ಲಿ ಅವರ ಮತ್ತೊಂದು ವಿಶೇಷ ಕಲೆಗಾರಿಕೆ ಕಾಣುವಂತಾಯಿತು.


    —————————–

ಗೊರೂರು ಅನಂತರಾಜು

Leave a Reply

Back To Top