ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
ನೆನಪು……
ನೆನೆಪುಗಳ ನಡಿಗೆ
ಅದೇತಡೆಯಾದಿತೆ ಅರಿಗಳಿಗೆ
ಬಾಳ ಪಯಣದ ಹಾದಿಯ
ಆ ಎರಡು ದಡಗಳಿಗೆ
ಅರಿವಿಲ್ಲದೆ ಅಲೆಗಳಾಗಿ
ಅಪ್ಪಳಿಸಿತೆ ಸದ್ದಿಲ್ಲದೇ
ಅರಿಗಳಿಗೆ….
ಮಣಭಾರದ ನೆನಪುಗಳೇ
ಜಾರಿದಂತಿದೆ ಚಿಗುರೆಲೆಯ
ಮೇಲೆ ಬಿದ್ದ
ಇಬ್ಬನಿಯ ಹನಿಗಳಂತೆ
ಮತ್ತೆ ಚಿಗುರೊಡೆಯುವುದೇ
ಮುಂಗಾರಿನ ಹನಿಯೊಡನೆ
ಬೆಳೆದ ಸಸಿಯಂತೆ…..
ಬಾಳ ತಿರುವಿನ ಅದೆಷ್ಟೋ
ಘಟನೆಗಳು…
ಹರಿದು ಸಾಗುತಲಿದೆ
ಪನ್ನೀರಿನ ನದಿಯ ಜಲದಂತೆ
ಅಗಾಧ ಕಡಲಿನ
ಅಂತರಾಳವ ಸೇರಲು
ದಡ ಸವೆದು ಹೋದಂತೆ…
ಪೊರೆಬಂದ ನಯನಗಳ
ಪರದೆಯ ಸರಿಸಿದ ನೋಟ
ಇಣುಕಿ ನೋಡುತಲಿದೆ
ನೆನಪಿನಂಗಳದ ಬೆಳದಿಂಗಳು
ಚಿಂತೆ ಚಿತೆ ಸೇರುವ
ಆ ಕಾಲನ ಚಕ್ರದಲ್ಲಿ
ನೆನಪುಗಳು ನೆನಪಾಗಿ ತೆಲಿದೆ
ಚಿರನಿದ್ರೇಯಲಿ……
–ಅಕ್ಷತಾ ಜಗದೀಶ.
Very good