ಗುರುರಾಜ್ ಸನಿಲ್ ಕವಿತೆ-ಅರಿವು

ಕಾವ್ಯ ಸಂಗಾತಿ.

ಗುರುರಾಜ್ ಸನಿಲ್ ಕವಿತೆ-

ಅರಿವು

ಅರ್ಥಕೆ ನಿಲುಕದ ವಿಸ್ಮಯ ಜಗತಿದು, ಮನಮಾಗುತಿದೆ
ಸತ್ಯ ಎಟುಕುತಿದೆ ಎಂಬಲ್ಲಿ ತಣ್ಣನೆ ಮರೆಯಾಗುವ ಅರಿವು!
ಮತ್ತೆ ಪಳೆಯುಳಿಕೆ ಕೆದಕಲು ಹೊರಟ ಜೀವನ ಚಾಳಿ
ಮರಳಿ ಎಲ್ಲವೂ ಗೋಜಲು, ಅಯೋಮಯ ಬದುಕು

ಮಾಯಾ ಪ್ರೇರಣೆಗೆ ತವಕಿಸಿ ಸ್ಖಲಿಸುವ ಪುರುಷ
ಒಡನೇ ತನ್ನತನ ಗೆಲಿಸಲು ತುಡಿವ ನಿಸರ್ಗ ಪ್ರಸವ
ನವ ಮಾಸದಿ ಜನನವಾಗುವ ಹೊಸ ಚೈತನ್ಯ
ದೃಷ್ಟಿ ದೃಷ್ಟಿಗೊಂದೊಂದು ರೂಪ, ಜೀವ ಪ್ರಪಂಚ

ಮೂಳೆ ಮಾಂಸಲ ಹಂದರದಲಿ ಏಕಾಂಗಿ ಪಯಣ
ಬಗೆಬಗೆ ಬಯಕೆಗಳ ಬೆನ್ನೇರಿ ಏದುಸಿರ ಓಟ
ದಕ್ಕಿತೆಂಬಲಿ ಮರೀಚಿಕೆಯ ಹತಾಶಭಾವ
ಭ್ರಮೆಯೇ, ನಿಚ್ಚಳವೇ ಅರಿವಾಗದಷ್ಟು ಅವಿದ್ಯೆಯಲಿ
ನಾನು ನನದೆನುವುದರ ನಡುವೆಯೂ ಅಪರಿಚಿತ

ಬದುಕದರ ಲಾಭಕೆ ನಲಿಸಿತು ನುಲಿಸಿತು ಮೃದುವಾಗಿಸಿತು
ಸಾವದರ ಪರಿಧಿಯಲಿ ಮೆಲುನಕ್ಕು ಅಪ್ಪುವ ಮುನ್ನ
ನಶ್ವರದೊಳಗಿನ ಈಶ್ವರತತ್ವ ಹೃದಯ ಬೆಳಗೀತೇ?

—–

ಗುರುರಾಜ್ ಸನಿಲ್.

11 thoughts on “ಗುರುರಾಜ್ ಸನಿಲ್ ಕವಿತೆ-ಅರಿವು

  1. ತುಂಬಾ ಅರ್ಥ ಗರ್ಭಿತ ಕವಿತೆ. ಏನನ್ನು ಅರಿಯಬೇಕೆಂಬುದರ ತುಡಿತ ಗಾಢವಾಗಿದೆ !

    1. ತುಂಬಾ ಅರ್ಥ ಗರ್ಭಿತ ಕವಿತೆ. ಏನನ್ನು ಅರಿಯಬೇಕೆಂಬುದರ ತುಡಿತ ಗಾಢವಾಗಿದೆ !

      -ಅಶೋಕ್ ವಳದೂರು

  2. ಅರಿವಿನ ಆಳವನ್ನು ಕೆದಕುತ್ತಾ ಸಾಗುವ ಈ ಬಗೆ ತುಂಬಾ ರೋಚಕ. ನಿಮ್ಮ ಕಾವ್ಯವು ಸಾಗುವ ರೀತಿ ಮನೋಜ್ಞವಾಗಿದೆ ಸರ್….

  3. ಜೀವ ಜೀವನದ ನಡೆಹಾದಿಯಲಿ ತೆರೆದುಕೊಳ್ಳುವ ವಾಸ್ತವತೆಯ ಅರಿವು ಮೂಡಿಸುವ ಕವಿತೆ.
    ಅಭಿನಂದನೆ ಸರ್

Leave a Reply

Back To Top