ಕಾವ್ಯ ಸಂಗಾತಿ
ಕವಿತ. ಎಸ್. ಅವರ ಕವಿತೆ-
ಅಂದು ಇಂದು
ಅಂದೊಂದು ದಿನವಿತ್ತು
ಮನೆ ತುಂಬ ಜನ
ಮಾತಿನ ಚಕಮಕಿ
ಸಂತೋಷದ ಅಲೆಗಳು
ನಗುವಿನ ಚೆಲ್ಲಾಟಗಳು
ರಸಭರಿತ ಕ್ಷಣಗಳು
ಗೌರವಾಧರಗಳು,ಪ್ರೀತಿ ವಿಶ್ವಾಸದ
ನಂಬಿಕೆಯ ಬಂಧ
ಆದರೆ ಇಂದು ಒಂದು ದಿನವಿದೆ
ಮನೆಯಲ್ಲಿ ಒಬ್ಬರು ಮತ್ತೊಬ್ಬರು
ನೀರವ ಮೌನವನು ಭೇದಿಸುವುದು
ಕಂಪ್ಯೂಟರ್ಗಳ ಕೀಲಿ ಒತ್ತುವ ಸದ್ದು
ಒತ್ತಡಗಳಿಗೆ ಸಿಲುಕಿ
ದುಃಖ ಕೋಪಗಳ ಬೆಂಕಿಯಲ್ಲಿ
ಕಣ್ಮರೆಯಾಗಿದೆ ನಗು
ಯಾರ ಪ್ರೀತಿ ವಿಶ್ವಾಸ ನಿಜವೆಂದು
ನಂಬಬೇಕು ಎಂದು
ಮನವು ತುಡಿಯುತಿದೆ
ಈ ಯಾಂತ್ರಿಕತೆಯ ಹಂದರದಲ್ಲಿ
ಕವಿತ. ಎಸ್