ಸುಕುಮಾರ-ಕಾಫಿಯಾನ ಗಜ಼ಲ್

ಕಾವ್ಯ ಸಂಗಾತಿ

ಸುಕುಮಾರ-

ಕಾಫಿಯಾನ ಗಜ಼ಲ್

ಮುತ್ತಿನ ಮಣಿಗಳಿವು ಪೋಣಿಸಿ ಓದಿಬಿಡು ತಪ್ಪಿಲ್ಲದೆ
ತುತ್ತಿನ ಕರಗಳಿವು ಬಣ್ಣಿಸಿ ಹಾಡಿಬಿಡು ಸಿಗ್ಗಿಲ್ಲದೆ

ಕಲ್ಲರಳಿ ಹೂವಾಗಿ ಗಂಧ ಸೂಸುತ್ತಿದೆ ಚಂದನವನ
ಗತ್ತಿನ ಮನಗಳಿವು ತಣಿಸಿ ದಣಿದುಬಿಡು ಹಿಗ್ಗಿಲ್ಲದೆ

ನಿಸರ್ಗ ಸಗ್ಗವಾಗಿ ನಮ್ರತ ಭಾವದಿ ಶೋಭಿತ
ಕತ್ತಿನ ರತ್ನಗಳಿವು ಎಣಿಸಿ ಕಣ್ಣಾಯಿಸಿಬಿಡು ಸದ್ದಿಲ್ಲದೆ

ಜಲಪಾತ ನದಿ ಅನುಪಾತಕೆ ನಾಡಿಗಳು ಮಿಡಿಯುತ್ತಿವೆ
ಮಸ್ತಿನ ತಾಣಗಳಿವು ಋಣಿಸಿ ಆಗಮಿಸಿಬಿಡು ಅಂಜಿಲ್ಲದೆ

ಕರುನಾಡು ಕಲೆಬೀಡು ‘ಕುಮಾರ’ವ್ಯಾಸ ರನ್ನರ ಸಿರಿಜಾಡು
ಜಗತ್ತಿನ ನಿಧಿಗಳಿವು ಕಾಣಿಸಿ ಲಾಲಿಸಿಬಿಡು ನಂಜಿಲ್ಲದೆ


ಸುಕುಮಾರ

Leave a Reply

Back To Top