ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ ಕವಿತೆ
ಒಂಟಿ
ತುಂಬಿದ ಕುಟುಂಬದಲ್ಲಿ
ಅಮ್ಮನ ಮನ ಸಂತೋಷಕ್ಕೆ ಪಾರವೇ ಇರಲಿಲ್ಲ
ಈಗ ಅದನ್ನು ಕೇಳುವವರೇ ಇಲ್ಲ
ಒಬ್ಬಳೇ ಬಿಕ್ಕುವಳು
ಮಾತಿಲ್ಲದೆ ಕಥೆಯಿಲ್ಲದೇ ಒಂಟಿಯಾಗಿ
ಬಾಗಿಲಿಗೆ ಕಟ್ಟಿದ ನಾಯಿಯಂತೆ
ಎಲ್ಲರೂ ಅಪರಿಚಿತರು
ಅಮ್ಮನಿಗೆ
ಅವರವರ ಕೆಲಸ ಅವರವರಿಗೆ
ಕೆಲಸವಿಲ್ಲದ ಅಮ್ಮನಿಗೆ ಸೊಗಸಿಲ್ಲ
ವಿಶಾಲ ಮನೆ ಇದ್ದರೇನು ? ಹೃದಯಕೆ ಹತ್ತಿರ ಯಾರೂ ಇಲ್ಲ
ಹಾಕಿದ ಕೊಂಡಿ ತೆಗೆದೆಯಿಲ್ಲ
ಹೋಗುವರು ಅವರವರ ಮನದ
ಬಾಗಿಲಿಗೆ ಬೀಗ ಜಡೆದು
ಬಿದ್ದಲ್ಲಿಯೇ ಬೀಳಬೇಕು
ಬಾಯಿದ್ದರೂ ಮೂಕರಾಗಿ ಮಲಗಬೇಕು .
ಎಷ್ಟೊಂದು ಹುರುಪು ಆಗ
ಚಿಕ್ಕ ಮನೆಯಲ್ಲಿ
ಚೌಕ ತುಂಬ ಮಂದಿ
ಹೊರ ಬಿದ್ದರೆ ಸಾಕು
ಎದ್ರಿ ಕುಂತ್ರಿ ಊಟ ಆತರಿ
ಅದೆಷ್ಟು ಚೆಂದಾಗಿತ್ತು ಮನೆ ಮನ
ಬೈಯ್ಯುತ್ತಿದ್ದೆ ಅದೆಷ್ಷು? ಮಾತನಾಡುವಿರಿ ಎಂದು
ಈಗ ನಿಶ್ಯಬ್ದ ಬರೀ ಅಂಗಳ
ಮಗ ಇಲ್ಲ ಸೊಸೆಯಿಲ್ಲ
ಬಂಧುವಿಲ್ಲ ಬಳಗವಿಲ್ಲ
ಎಲ್ಲರೂ ಬಿಜಿ ಬಿಜಿ
ಅವರವರ ಪೋನಿನಲ್ಲಿ
ಇನ್ನೂ ಏನೇನು ಬರುತ್ತವೋ ?
ನಾ ಕಾಣೆ ಭಗವಂತ
ನೀನಾದರೂ ಬಾ ಮೆಲ್ಲಗೆ ಮಾತನಾಡುವೆ
ನನ್ನೆಲ್ಲ ಮಾತುಗಳನು ಕೇಳಲು ನಿನಗೂ ಕಿವಿಯಿಲ್ಲ ಬಿಡು
ಏಕೆಂದರೆ ನಿನಗೂ ಹಾಕಿರುವರಲ್ಲ ಕಿವಿಯೊಳಗೆ ಓಲೆ ಝುಮಕಿ
ಅದೇ ಅಲ್ಲವೇ ? ಜೂಮ್ ಮೀಟ್ ನಾವೆಲ್ಲ ಸೇರೋದು
ಒಮ್ಮೆಯಾದರೂ ಸಿಗುವುವೇ
ಕಳೆದ ಆ ಸುದಿನಗಳು
————————
ಡಾ ಸಾವಿತ್ರಿ ಕಮಲಾಪೂರ
Nice lines