ಉಳಿತಾಯ ಬದುಕಿನ ಸುಭದ್ರತೆ-ರೇಷ್ಮಾ ಕಂದಕೂರ

ಲೇಖನ ಸಂಗಾತಿ

ಉಳಿತಾಯ ಬದುಕಿನ ಸುಭದ್ರತೆ

ರೇಷ್ಮಾ ಕಂದಕೂರ

ಬದುಕು ಅಭ್ಯಾಸ ಹವ್ಯಾಸಗಳೊಂದಿಗೆ ಸಮಸ್ಯೆ ಪರಿಹಾರದ ಆಯಾಮಗಳೊಂದಿಗೆ ತಿರುವುಗಳನ್ನು ಪಡೆದುಕೊಳ್ಳುತ್ತದೆ. ದಿನನಿತ್ಯದ ಬದುಕು ಗಹನ ವ್ಯವಹಾರ ಆಚಾರ ವಿಚಾರಗಳಲ್ಲಿ ನಡೆ ನುಡಿ ಉಡುಗೆ ತೊಡುಗೆ ಆಸೆ ಆಮಿಶೆಗಳಿಂದ ಕೂಡಿದೆ.ಆತಂಕ ಅತೃಪ್ತಿ ಎಂಬ ಆಘಾತಕಾರಿ ಒಳಸುಳಿಯು ಸೇರಿದೆ.

            ಜೀವನ ಶೈಲಿ ಒಬ್ಬರಿಂದ ಇನ್ನೊಬ್ಬರ ಭಿನ್ನವಾದುದು.ಆದರೆ ಇಂದಿನ ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದ ಮೇಲೆ ಇದೀಗ ಜನ ಆರ್ಥಿಕ ಶಿಕ್ಷಣದ ಮಹತ್ವದ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂಬುದನ್ನು ಮನದಟ್ಟು ಮಾಡಿಕೊಃಡಿದ್ದಾರೆ.ಹೀಗಾಗಿ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಆರ್ಥಿಕ ಶಿಕ್ಷಣ ನೀಡುವುದು ಅನಿವಾರ್ಯ ಬದುಕು ಸುಖಮಯವಾಗಿ ಚಿಂತೆ ರಹಿತವಾಗಿ ಸುರಕ್ಷಿತ ಜೀವನ ನಡೆಸಲು ಸಹಕಾರಿ.

   ಧನ ಬಹುದೊಡ್ಡ ಸಾಧನ ಇದನ್ನು ಅರಿತು ಬಳಸಿದರೆ ಪ್ರಗತಿ ಅಲಕ್ಷ್ಯದಿಂದ ದುಂದು ಗಾರಿಕೆ ಮಾಡಿದರೆ ಮತ್ತೆ ಮೇಲೇರಲಾಗದು ದುರ್ಗತಿಗೆ ಕಾರಣವಾಗಬಹುದು.ಎಂಬುದು ಅರಿತು ಬಾಳಬೇಕು. ಹಣದ ಬಗ್ಗೆ ಉದಾಸೀನ ಸಲ್ಲದು ಹಣವೇ ಸರ್ವಸ್ವ ಎನ್ನುವ ವ್ಯಾಮೋಹ ಬಳಸಿಕೊಳ್ಳ ಬೇಕಿಲ್ಲ ಹಣವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತ ಆರ್ಥಿಕ ಆಘಾತಗಳನ್ನು ತಡೆದು ಸಭ್ಯ ಸಂತೃಪ್ತಿ ಬದುಕನ್ನು ನಿರ್ಮಿಸಿಕೊಳ್ಳಲು ಬೇಕಾದ ಜಾಣ್ಮೆ ಯನ್ನು ರೂಢಿಸಿಕೊಳ್ಳಬೇಕು.

ಶ್ರಮವಹ ದುಡಿದು ಹಣ ಗಳಿಸಿ ಸುಲಭವಾಗಿ ಸಿಗಬೇಕು ಹಣ ಎಂಬ ಆಶಯ ಸರ್ವನಾಶಕ್ಕೆ ದಾರಿ.ನಮ್ಮ ಜೀವನ ಶೈಲಿಯನ್ನು ನಮ್ಮ ಆದಾಯಕ್ಕೆ ತಕ್ಕಂತೆ ಹೊಂದಿಸಿಕೊಂಡು ಬದುಕುವುದು ಅಗತ್ಯ.”ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ನಾಣ್ಣುಡಿಯಂತೆ ನಮ್ಮ ಇತಿಮಿತಿಯೊಳಗೆ ಸರಳ ಸುಂದರ ಬದುಕನ್ನು ರೂಪಿಸಿಕೊಂಡು ನೆಮ್ಮದಿಯ ನಾಳೆಯ ಬದುಕನು ಜಿವಿಸಲು ಸಾಧ್ಯ.

ನಮ್ಮ ಸಂಪಾದನೆಯ ಆಧಾರದ ಮೇಲೆ ಪ್ರತಿ ತಿಂಗಳು ಸಮಂಜಸವಾದ ಬಜೆಟ್ ತಯಾರಿಸಿ ಬರೆದಿಟ್ಟು ಆದಾಯದ ಕನಿಷ್ಠವಾದರೂ ಉಳಿತಾಯ ಮಾಡುವ ಅಗತ್ಯವಿದೆ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಹಣವನ್ನು ನಿಗದಿಮಾಡಿ ಖರ್ಚು ಮಾಡಬೇಕಿದೆ.

ಬಂದ ಹಣವನ್ನು ಮೋಜಿನಿಂದ ಖರ್ಚು ಮಾಡಿ ಬರುವ ಕಷ್ಟಗಳ ಸಮಯಕ್ಕೆ ಆ ಹಣ ನೆರವಾಗಬಹುದಲ್ಲವೇ,ಸರಿಯಾಗಿ ಆಲೋಚಿಸಿ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡು ಸಾಕಷ್ಟು ಹಣವನ್ನು ಬಳಸಬಹುದು.


ರೇಷ್ಮಾ ಕಂದಕೂರ

One thought on “ಉಳಿತಾಯ ಬದುಕಿನ ಸುಭದ್ರತೆ-ರೇಷ್ಮಾ ಕಂದಕೂರ

  1. ಉಳಿತಾಯದ ಬಗ್ಗೆ ಅಚ್ಚು ಕಟ್ಟಾಗಿ ವಿವರಿಸಿದ್ದೀರಿ ಮೇಡಂ.

Leave a Reply

Back To Top