ಕಾವ್ಯ ಸಂಗಾತಿ
ಹನಿಬಿಂದು ಕವಿತೆ
ಮಾನವ ಬದುಕು
ಮಾನವ ಹುಟ್ಟಿ ಬದುಕಿ ಸಾಯಲು
ಪ್ರಾಣಿಯ ಹಾಗೆಯೇ ಬದುಕಲ್ವಾ?
ಅಲ್ಪ ಸ್ವಲ್ಪವೇ ಆದರೂ ಸಾಕು
ಸಾಧಿಸ ಬೇಕು , ನಿಜ ಅಲ್ವಾ!
ಕಲೆ ಸಾಹಿತ್ಯ ನಾಟ್ಯ ನರ್ತನ
ಯಾವುದಾದರೂ ಸರಿ ಅಲ್ವಾ?
ವಿದ್ಯೆ ಬುದ್ಧಿ ಓದಿನ ಜ್ಞಾನ
ತಿಳಿದುದು ಹೇಳಲು ಬೇಕಲ್ವಾ?
ಓದು ಬರಹ ಚಿತ್ರ ಕಲೆಗಳ
ಹವ್ಯಾಸ ಒಳ್ಳೇದು ಅನ್ನೋಲ್ವ
ಕಲಿತಷ್ಟು ಮುಗಿಯದ ತಣಿವು ತೀರದ
ಹೊತ್ತಿಗೆ ನಮ್ಮಲಿ ಇದೆಯಲ್ವ!
ಜಾತಿ ಧರ್ಮದ ಸಾರವ ತಿಳಿಸುವ
ಗ್ರಂಥ ಮಾಲಿಕೆ ತಿಳಿಯೋಲ್ವ!
ಕೊತಿಯಂತೆ ಇದ್ದರೂ ಮನುಜಗೆ
ಬೇಕು ಜ್ಞಾನವು ಸುಳ್ಳಲ್ಲ..
———————–
ಹನಿಬಿಂದು
ಕವನ ಗ್ರಾಂಥಿಕ ರೂಪದಲ್ಲಿ ಮೂಡಿ ಬಂದಿದೆ