ಪ್ರೊ ಸಿದ್ದು ಸಾವಳಸಂಗ-ಅಮ್ಮಾವ್ರ ಗಂಡ

ಕಾವ್ಯ ಸಂಗಾತಿ

ಪ್ರೊ ಸಿದ್ದು ಸಾವಳಸಂಗ-

ಅಮ್ಮಾವ್ರ ಗಂಡ

ನಾವಿಬ್ಬರೂ ಗಂಡ ಹೆಂಡತಿಯರು ಮಾತನಾಡಿದ್ದಕ್ಕಿಂತಲೂ ಜಗಳವಾಡಿದ್ದೆ ಹೆಚ್ಚು !
ನಾ ಹೆಚ್ಚು ನೀ ಹೆಚ್ಚು !
ನಮ್ಮಪ್ಪ ಸಿರಿವಂತ, ನಿಮ್ಮಪ್ಪ ಸಿರಿವಂತ !
ಮಾತಿಗೆ ಮಾತು ಬೆಳೆದು ಮಾತು ಬಿಟ್ಟಿದ್ದೆ ಹೆಚ್ಚು !
ನನ್ನ ಕಡೆಯವರು ಬಂದರೆ ಸಾದಾ ಉಪಚಾರ
ಅವರ ಕಡೆಯವರು ಬಂದರೆ ರಾಜೋಪಾಚಾರ !
ನಾನು ಮಾತ್ರ ಮೂಕ ಪ್ರೇಕ್ಷಕ !
ಬಂದು ಬಾಂಧವರ ಪಾಲಿಗೆ ನಾನು ಅಮ್ಮಾವ್ರ ಗಂಡ !
ನನ್ನ ಸಂಕಟ ಅವರಿಗೇನು ಗೊತ್ತು ?
ಮದುವೆ ಎಂಬ ಬೋನಲ್ಲಿ ಬಿದ್ದು
ಹೊರಬರಲಾರದೆ ಒದ್ದಾಡುತ್ತಿರುವ ಇಲಿ !
ಹೆಂಡತಿಯೇ ಮನೆಗೆ ಯಜಮಾನಿ
ನಾನು ದುಡಿದು ತಂದು ಹಾಕುವ ಕೂಲಿ !
ನಮ್ಮ ಅತ್ತೆಗೆಗೆ ಮಗಳೇ ಸರ್ವಸ್ವ
ನಾನು ಮಾತ್ರ ನೀರಸ,ನಿಸತ್ವ !
ಮಕ್ಕಳೋ ಮಹಾನ್ ಬೆರಿಕಿ !
ಅವರಮ್ಮ ಹೇಳಿದ್ದೆ ವೇದ ವಾಕ್ಯ
ನನ್ನ ಮಾತು ಅವರಿಗಿಲ್ಲ ಸಖ್ಯ !
ಸುಮ್ಮನೆ ಕಿತ್ತಾಟದಲ್ಲಿ ನೆಮ್ಮದಿಯೇಕೆ ಹಾಳು
ಕೊಟ್ಟದ್ದು ತಿನ್ನುತ್ತೇನೆ ಕೂಳು !
ನನಗೂ ಬರಬಹುದು ಒಂದು ದಿನ ಸುದಿನ
ಕಾಯುತ್ತಿದ್ದೇನೆ ಆ ಒಂದು ದಿನ !
ನನ್ನದು ಅದೃಷ್ಟ ಏಕೆ ಖುಲಾಯಿಸಬಾರದು ?
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ !
ನನ್ನ ಕಾಲ ಬಂದಾಗ ನಾನು
ತೋರಿಸುತ್ತೇನೆ ಏನೆಂಬುದು !
ಈಗ ಏತಕೆ ಅನಾವಶ್ಯಕ ಜಗಳ !
ಸುಮ್ಮನಿದ್ದು ಬಿಡುವುದೇ ವಾಸಿ !
ಇಲ್ಲದಿರೆ ಇದ್ದೇ ಇದೆ, ಜನರಿಂದ ಕೊನೆಗೆ ಹೊಗಳಿಸಿಕೊಳ್ಳುವುದು ಅಮ್ಮಾವ್ರ ಗಂಡ !


ಪ್ರೊ ಸಿದ್ದು ಸಾವಳಸಂಗ

Leave a Reply

Back To Top