ರಾಹುಲ್ ಸರೋದೆ-ಗಾಂಧಿ ಮುತ್ಯಾ…..

ಕಾವ್ಯ ಸಂಗಾತಿ

ರಾಹುಲ್ ಸರೋದೆ-ಗಾಂಧಿ ಮುತ್ಯಾ…..

ಮುತ್ಯಾ ಮುತ್ಯಾ ಗಾಂಧಿ ಮುತ್ಯಾ
ಸತ್ಯಾಗ್ರಹದಿ ಬ್ರೀಟಿಷರನ್ನು
ಭಾರತದಿಂದ ತೋಲಗಿಸಿದ ಮುತ್ಯಾ….

ರಕ್ತ ಬಲಿದಾನದಿ ನಮ್ಮೆಲ್ಲರಿಗೆ
ಸ್ವಾತಂತ್ರ್ಯ ಕೊಡಿಸಿದ ಮುತ್ಯಾ
ಅಹಿಂಸಾ ಪರಮೋಧರ್ಮವೆಂದು
ಶಾಂತಿ ಪಾಠವ ತಿಳಿಸಿದ ಮುತ್ಯಾ…..

ನಾನು ನನ್ನದೆಂದು ಮೆರೆಯದೆ
ತುಂಡುಡುಗೆಯ ತೊಟ್ಟ ಮುತ್ಯಾ
ಚರಕವ ಸುತ್ತಿ ಬಟ್ಟೆಯ ನೆಯ್ದು
ಸ್ವದೇಶಿ ಬಳಸಿ ವಿದೇಶಿ ತ್ಯಜೀಸಿ
ಎಂಬ ನೀತಿಪಾಠವ ಕಲಿಸಿದ ಮುತ್ಯಾ…..

ಮುತ್ಯಾ ಮುತ್ಯಾ ಗಾಂಧಿ ಮುತ್ಯಾ
ನೀ ತೋರಿದ ಮಾರ್ಗದಲ್ಲಿ ನಡೆವೆವು ಮುತ್ಯಾ
ಗೋಡ್ಸೆಯಿಂದ ವೀರ ಮರಣವಪ್ಪಿದ ಮುತ್ಯಾ
ಮುತ್ಯಾ ಮುತ್ಯಾ ಗಾಂಧಿ ಮುತ್ಯಾ …..


  ರಾಹುಲ್ ಸರೋದೆ 











One thought on “ರಾಹುಲ್ ಸರೋದೆ-ಗಾಂಧಿ ಮುತ್ಯಾ…..

Leave a Reply

Back To Top