ನಿತ್ಯ ಜಗನ್ನಾಥ್ ನಾಯ್ಕ್-ಶಾಸ್ತ್ರೀಜಿಗೊಂದು ಸಲಾಂ

ಕಾವ್ಯ ಸಂಗಾತಿ

ನಿತ್ಯ ಜಗನ್ನಾಥ್ ನಾಯ್ಕ್-

ಶಾಸ್ತ್ರೀಜಿಗೊಂದು ಸಲಾಂ

ಚಿಕ್ಕ ದೇಹ ದೊಡ್ಡ ಆದರ್ಶದ
ದಕ್ಷ ,ಸರಳ ಸಜ್ಜನಿಕೆಯ ವ್ಯಕ್ತಿತ್ವದ
ಭಾರತ ಕಂಡ ಅಪ್ರತಿಮ ನಾಯಕರಾದ
ಲಾಲ್ ಬಹದ್ದೂರ್ ಶಾಸ್ತ್ರೀಜಿಗೊಂದು ಸಲಾಂ

ಭಾರತದ ಕೃಷಿ ಕನಸಿಗೆ ಏಣಿ ಹಾಕಿದ
ಜೈ ಜವಾನ್ ಜೈ ಕಿಸಾನ್ ಘೋಷಣೆ ನೀಡಿದ
ಸಹನೆ,ತಾಳ್ಮೆ ವಿನಯದ ಪ್ರತೀಕವಾದ
ಜನ ಮೆಚ್ಚಿದ ಶಾಸ್ತ್ರೀಜಿಗೊಂದು ಸಲಾಂ

ಹೋರಾಟದ ಜಾತಕದಲ್ಲಿ ಜನ್ಮತಾಳಿದ
ಧೈರ್ಯ ಶೌರ್ಯವ ಹುಟ್ಟಿನಿಂದಲೇ ಹೊಂದಿದ
ತಾಯ್ನಾಡಿಗಾಗಿ ವೀರಾವೇಶದಿ ಹೋರಾಡಿದ ಪ್ರಧಾನಿಯಾಗಿ ದೇಶ ಆಳಿದ ಶಾಸ್ತ್ರೀಜಿಗೊಂದು ಸಲಾಂ

ತಿಳಿ ಮುಗಿಲಿನಲ್ಲಿ ಹೊಳೆವ ಅಮೂಲ್ಯ ರತ್ನ
ಅಜಾತಶತ್ರು ರಾಜಕಾರಿಣಿ ಮಹಾನ್ ಚೇತನ
ಯುವ ಪೀಳಿಗೆಗೆ ಮಾದರಿಯಾದ ಭಾರತ ರತ್ನ
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿ ನಿಮಗಿದೋ ನನ್ನ ಸಲಾಂ

ನಿತ್ಯ ಜಗನ್ನಾಥ್ ನಾಯ್ಕ್


Leave a Reply

Back To Top