ಸುಕುಮಾರ-ಗಜಲ್

ಕಾವ್ಯ ಸಂಗಾತಿ

ಸುಕುಮಾರ-

ಗಜಲ್‍

ಶ್ವೇತ ವಸ್ತ್ರಧಾರಿ ಶಾಂತಿ ಸರಳತೆಯ ಪ್ರತೀಕ ಇವರೇ ನಮ್ಮ ಗಾಂಧಿ
ಮಂದಹಾಸ ಮೂಡಿಸುತ ಅಹಿಂಸಾಮಂತ್ರ ಪಠಿಸಿದ ಮಾಂತ್ರಿಕ ಇವರೇ ನಮ್ಮ ಗಾಂಧಿ

ದೇಶ ಸೇವೆ ಈಶ ಸೇವೆ ಇದುವೇ ಪ್ರತಿ ಶ್ವಾಸದಲಿ ಬೆರೆತು
ಆಂಗ್ಲ ಆಡಳಿತ ಧಿಕ್ಕರಿಸಿ ಸುಧಾರಣೆ ಧಕ್ಕಿಸಿದ ನಾಯಕ ಇವರೇ ನಮ್ಮ ಗಾಂಧಿ

ಕ್ಲೇಶ ಕಲಹಗಳ ಇಬ್ಬಗೆದು ನಿರ್ಮಲ ನಿತ್ಯ ಆನಂದಮಯಕೆ ದಾರಿದೀಪ ಆದಿರಿ
ವಿಶ್ವಶಾಂತಿ ಕಾಂತಿ ಹರಡಿದ ಏಕತೆಯ ಹರಿಕಾರಕ ಇವರೇ ನಮ್ಮ ಗಾಂಧಿ

ಎಂತಹುದೇ ಕಾರ್ಯವಿರಲಿ ಘನತೆಯ ಸಿರಿ ಮೊಳಗಿಸಿ ಕಾಯಕ ಯೋಗಿ ಆದರು
ಚರಕದಲಿ ನೇಯುತ ಆದರು ಸ್ವಾವಲಂಭನೆಗೆ ಧ್ಯೋತಕ ಇವರೇ ನಮ್ಮ ಗಾಂಧಿ

ರಾಮ ರಹೀಮರ ಒಗ್ಗೂಡಿಸಿ ಐಕ್ಯತೆಯ ಅಂಕುರಕೆ ನೀರೆರೆದು ಸಲಹಿದರು
ಹೇ ರಾಮ್ ! ಕೊನೆ ಉಸಿರಾಗಿಸಿ ಜಗತ್ತ್ಯಜಿಸಿದ ಕಾರುಣ್ಯಕ ಇವರೇ ನಮ್ಮ ಗಾಂಧಿ


ಸುಕುಮಾರ

Leave a Reply

Back To Top