ಡಾ ಅನ್ನಪೂರ್ಣ ಹಿರೇಮಠ-ಈ ಹೃದಯ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-

ಈ ಹೃದಯ

ಬಯಸಿ ಬಯಸಿ ಹಠ ಮಾಡುತಿದೆ
ಈ ಹೃದಯ ನೀ ಬೇಕೆಂದು ಇಂದು
ಕೊರಗಿ ಕೊರಗಿ ಸೋತು ಹೋಗಿದೆ
ಈ ಹೃದಯ ನೊಂದು ಬೆಂದು//

ಸನಿಹ ಸರಸ ಸಲುಗೆ ಬೇಕಾಗಿದೆ
ವಿರಹ ವಿರಸ ದೂರ ಸಾಕಾಗಿದೆ
ಕಣ್ಣೊಳಗೆ ನೀ ನಿಂದು ಕಾಡುತಿರುವೆ
ಬಂದು ಬಂದು ಹೊತ್ತು ಗೊತ್ತಿಲ್ಲದೆ
ಹೃದಯ ಭಾಷೆ ತಿಳಿಯದೆನೋ
ಗೆಳೆಯ ನಿನಗಿಂದು
ಸಂತೈಸಲಾರೆಯ ಇಂದು ನೀ ಬಂದು//

ಹೃದಯ ಬಡಿತ ಕೇಳದೆನೋ
ಗುಂಡಿಗೆಯು ಒಡೆಯುವ ಸದ್ದು
ನೀ ಬರದಿರೆ ಚೂರು ಚೂರು ಇಂದು
ದಯಬಾರದೇ ಚೂರು ಪಾರು//

ನಿನ್ನ ಕಂಡಂದೆ ಬೆಚ್ಚಿಬಿದ್ದು
ಹುಚ್ಚಾಗಿದೆಯೋ ಈ ಹೃದಯ
ಮರೆತು ಮರೆಯಾಗಿ
ವಿರಹದೀಟಿಯಿಂದ ಇರಿದು
ಕೊಚ್ಚಬೇಡ ಈ ಹೃದಯ//

ನಿನ್ನ ಆಟ ಹುಡುಗಾಟದಿಂದ
ಕಾಟ ಕೊಡಬೇಡ ಹೃದಯಕಿಂದು
ಸುಟ್ಟು ಕರಕಲಾಗದ ಮುನ್ನ
ಬಂದು ಹೋಗಿಸು ಈ ಹುನ್ನ//

ಕೋಪ ತಾಪ ಏಕೆ ಪರಿತಾಪ
ಬಿರುಗಾಳಿ ಎದ್ದು ದೂಳು ತುಂಬಿ
ಎದ್ದಿದೆ ಹೃದಯದಲೆಕೋ ಕೋಲಾಹಲ
ಎದೆಯ ದಡಕ್ಕೆ ಏಟು //

ಅಗಲಿಕೆಯ ನೋವು ಹೃದಯ ಹಿಂಡುತಿದೆ
ಬಯಕೆ ಬೆಂದು ಬಿರುಕಾಗಿದೆ
ನಿನ್ನ ಸ್ಪರ್ಶ ತಾಕದೆ
ಹರ್ಷಗೊಳ್ಳದು ಈ ಹೃದಯ
ಸ್ವಾರ್ಥವಿಲ್ಲದ ಈ ಹೃದಯದಿ
ಪ್ರಿಯ ನೀ ಇರಬಾರದೆ ಹಸಿರಾಗ
ಈ ಜೀವ ಇರುವವರೆಗೆ


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top