ಕಾವ್ಯ ಸಂಗಾತಿ
ಬಾಗೇಪಲ್ಲಿಯವರ
ಗಜಲ್
ಪರಿಸರದಿ ಸರಪಳಿಯಂತೆ ಇದೆ ಸಕಲವೂ ನಿನ್ನ ಅರಿವಿಗಿರಲಿ
ಪ್ರತಿ ಜೀವಿ ಪ್ರಕೃತಿಯಲಿ ದೂಳ ಕಣವಿದ್ದಂತೆ ನಿನ್ನ ತಿಳಿವಿಗಿರಲಿ
ಎಲ್ಲರ ಇರುವಿಕೆ ಬೇರೆಲ್ಲಾ ಜೀವಿ ಇರುವಿಕೆಯೊಂದಿಗೆ ಹೆಣೆದಿದೆ
ನಾವುಗಳು ನಾವಂತೇ ಇರಲು ಅದುವೇ ಕಾರಣವು ನೆನಪಿಗಿರಲಿ
ನಿನ್ನಂತೆ ಇನ್ನೊಬ್ಬನಿಲ್ಲ, ಯಾರೊಬ್ಬರೂ ಮತ್ತೊಬ್ಬರಂತಿಲ್ಲ ಜಗದಿ
ಕನಿಷ್ಠ ಸತ್ಯವ ಅರಿಯದನೆಂದು ಜರಿವುದು ಲೋಕ ನಿನ್ನ ಪ್ರಜ್ಞೆಗಿರಲಿ
ಸರಿಸಾಟಿ ಇಲ್ಲದ ಅನುಪಮ ಜೀವಕಣ ನೀನು ಸೃಷ್ಟಿ ಯೊಳಗೆ
ಯಾರನಾದರೂ ಅನುಕರಿಸುವ ಇಚ್ಛೆ ಮನದಿಂದ ಹೊರಗಿರಲಿ
ಮೌನ ಗುಹೆಯಿಂದ ಬಂದಿಹೆವು ಮಣ್ಣಿನೊಳ ಕತ್ತಲಿಗೆ ಹೋಗುವೆವು
ಕೃಷ್ಣಾ ! ನಮ್ಮನು ಒಳಗೊಂಡಿಹ ಈ ಪರಿಸರದ ಸೂತ್ರ ಮೆರೆದಿರಲಿ
ಬಾಗೇಪಲ್ಲಿ
ಸಾರ್ವಕಾಲಿಕ ಸತ್ಯವನ್ನು ಸೊಗಸಾಗಿ ಹೇಳಿದ್ದೀರಿ ಅಭಿನಂದನೆಗಳು