ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠರವರ

ಗಜಲ್

ಭಾವಸಿರಿ ಕೆದ ಕೆದಕಿ ಆಸೆಯಂಗಳ ಬೆದಕಿ ಮರೆಯಾದೆಯಾ
ಎದೆಗೆ ಇರಿ ಇರಿದು ಮನದಂಗಳ ಹೊಸಕಿ ದೂರಾದೆಯಾ

ಅರಿಯದೆ ಜೀವ ತಂತಿಯ ರಾಗದೆ ನುಡಿ ನುಡಿಸಿ ಮೇಳೈಸಿದೆ
ಬಯಕೆ ಬಾಂದಳದಲಿ ಒಡಲಿನಂಗಳ ಹಿಸುಕಿ ಮರೆಯಾದೆಯಾ

ಮಿಡಿತಗಳ ಹೆಕ್ಕುತ ಹೆಕ್ಕುತ ಒಲವಧಾರೆ ಉಕ್ಕಿಸಿ ಹರಿಸಿದೆ
ಸ್ಪರ್ಶ ಸುಖದ ಹರ್ಷದಂಗಳ ಕುಟುಕಿ ಮರೆಯಾದೆಯಾ

ನೋಟದಲೇ ಸಿಹಿಗನಸುಗಳ ಬಿತ್ತಿ ಬಿತ್ತಿ ಹಸಿರು ಚಿಗುರಿಸಿದೆ
ಮೌನ ತಂತಿಯ ನುಡಿಸಿ ರಾಗದಂಗಳ ಮಿಟುಕಿ ಮರೆಯಾದೆಯಾ

ಮೋಹ ಪಾಶದ ಸರಳುಗಳಿಂದ ಬಿಗಿಯಾಗಿ ಬಂದಿಸೆನ್ನೆ ಸೆಳೆದೆ
ಹುಸಿ ಭರವಸೆಯಲಿ ಪ್ರೀತಿಯಂಗಳ ತದಿಕಿ ಮರೆಯಾದೆಯಾ

ಮಾತ ಹೊನಲಲಿ ತೇಲಿಸಿ ತೇಲಿಸಿ ಮೈ ಮರೆಸಿ ಮರುಳಾಗಿಸಿದೆ
ಉಸಿರ ಬಗೆದು ಪ್ರೇಮದಂಗಳ ಮುಸುಕಿ ಮರೆಯಾದೆಯಾ

ಬಂಧ ಸಂಬಂಧವ ಹೊಸೆ ಹೊಸೆದು ಅನುಳಲಿ ಒಂದಾದೆ
ಹೃದಯ ಜೋಳಿಗೆಯ ಒಲವಿನಂಗಳ ಕಲಕಿ ಮರೆಯಾದೆಯಾ


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top