ರತ್ನರಾಯಮಲ್ಲ ಗಜಲ್

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಗಜಲ್

ಪುಸ್ತಕಗಳ ಜೊತೆಗಿದ್ದರೂ ಹಗಲಿರುಳು ನಿನ್ನದೇ ಧ್ಯಾನ
ಬಿಳಿಯ ಹಾಳೆಗಳಿದ್ದರೂ ಹಗಲಿರುಳು ನಿನ್ನದೇ ಧ್ಯಾನ

ನಿನ್ನ ಕುಡಿ ನೋಟಕ್ಕಾಗಿ ಹಂಬಲಿಸುತಿರುವೆ ಅರಗಿಣಿ
ಬಟ್ಟಲು ಕಣ್ಣೆದುರಿದ್ದರೂ ಹಗಲಿರುಳು ನಿನ್ನದೇ ಧ್ಯಾನ

ನಿನ್ನ ಪ್ರೀತಿಯನು ಉಸಿರಾಡುತಿರುವೆನು ಕ್ಷಣ ಕ್ಷಣವು
ಸಂತೆಯೇ ನೆರೆದಿದ್ದರೂ ಹಗಲಿರುಳು ನಿನ್ನದೇ ಧ್ಯಾನ

ಹೊತ್ತು ಗೊತ್ತು ಇಲ್ಲ ಕನವರಿಕೆಯಲಿ ಮುಳುಗಿರುವೆನು
ಊರೂರು ಸುತ್ತಿತಿದ್ದರೂ ಹಗಲಿರುಳು ನಿನ್ನದೇ ಧ್ಯಾನ

ಮಲ್ಲಿಗೆ ಮೊಗ್ಗು ಅರಳಿರುವುದೆ ನಿನ್ನ ಮುಡಿ ಸೇರಲು
ಗಾಲಿಬ್ ಆವರಿಸಿದ್ದರೂ ಹಗಲಿರುಳು ನಿನ್ನದೇ ಧ್ಯಾನ


ರತ್ನರಾಯಮಲ್ಲ

Leave a Reply

Back To Top