ಹಮೀದಾ ಬೇಗಂ ದೇಸಾಯಿ-ಸ್ನೇಹ..

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಸ್ನೇಹ..

ಪ್ರೀತಿ ನಂಬುಗೆ ಬೆಸುಗೆ
ಸ್ನೇಹದೊಲವಿನ ಒಸಗೆ
ಕಾರಿರುಳ ಬಾಳಿನಲಿ
ಹೊಂಗಿರಣ ಬೆಳಗಿದೆ ..

ಎಳೆತನದಿ ತನ್ನವರು
ಬೆಳೆದಂತೆ ಪರರವರು
ಮನ ಬಿಚ್ಚಿ ಮಾತಾಡೆ
ಪರರು ತನ್ನವರು….

ಮನವನರಿಯದ ಬಂಧು
ಮೆದು ಹಗ್ಗದುರುಳು
ಹೇಯ ಸ್ವಾರ್ಥದಿ ಸಿಲುಕಿ
ನಲುಗುವುದು ಕರುಳು…

ಗೆಳೆತನದ ಹಂದರದಿ
ಬಿಚ್ಚು ಮನಸಿನ ಹೂವು
ಅರಳಿ ಬೀರಲು ಕಂಪು
ಮನಕದುವೆ ತಂಪು…

ಮನಗಳೆರಡರ ಕೆಳೆಯು
ಜೀವನಕೆ ಹೊಸ ಕಳೆಯು
ಸಂಕೋಚ ತೆರೆ ಸರಿಯೆ
ವಿಕಸಿತವು ಎದೆಯರಳು…


ಹಮೀದಾ ಬೇಗಂ ದೇಸಾಯಿ

Leave a Reply

Back To Top