ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ಪ್ರೇಯಸಿ

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಪ್ರೇಯಸಿ

ನೀನಿದ್ದೆ ಪ್ರೀತಿ-
ಕೊಡುಗೈ ದಾನಿ
ಕೊಚ್ಚಿ ಹೋಗುವಂತಹ ಪ್ರೀತಿ.
ನಿರಮ್ಮಳ ಆಕಾಶ
ಎತ್ತರೆತ್ತರದ ಆಸೆ!ಆಕಾಂಕ್ಷೆ!

ಕನಸು ಗಾಢವಾಗಿ
ಕಾರ್ಮೋಡ ಕವಿದು
ಗುಡುಗು ಸಿಡಿಲಿನಾರ್ಭಟ!

ಕೊಚ್ಚಿ ಹೋಯಿತು
ಪ್ರೀತಿ
ನಿರಮ್ಮಳ ಆಕಾಶದ ತುಂಬ
ಮಿಂಚುಗಳ ಸಂಚಿನಲ್ಲಿ
ಮಿಂಚುಳ್ಳಿಗಳ ಹೊಂಚಿನಲ್ಲಿ
ಪ್ರೀತಿ!

ಎಲ್ಲಿ ಕಳೆದು ಕೊಂಡೆಯೇ
ನಿನ್ನ ಪ್ರೀತಿ ವಿಶ್ವಾಸದ ಕೊಡೆ
ನಿನ್ನ ನೀತಿ ರೀತಿಗಳ ಒರತೆ!

ಮತ್ತೆ ನನಸುಗಳು ಹಗಲಿನಲ್ಲೇ
ಪ್ರೀತಿ-
ಬಿಳಿ ಮೈ ಬಿಳುಪು ಬಣ್ಣ
ಬಿಳಿ ಮನದ ಅವಶೇಷ
ಎಲ್ಲಿ ಬಿಟ್ಟೆ ನೆನಪು
ನಿನ್ನ ಒನಪು, ಪ್ರೀತಿ!

ಕಾಲಾಂತರದಲ್ಲಿ ಕಾರ್ಮೋಡ
ಕರಗಿ ನೀ ಬರೆ ಬರೆ
ದೇಹವಿಲ್ಲದ ದಾಹ.
ಮೀಟಿ ಹೃದಯದ ಎಲ್ಲ
ಕವಾಟಗಳು ಒಮ್ಮೆಗೇ ತೆರೆದು
ಹೃದಯ ಸ್ತಂಭನ .

ಟ್ರಾನ್ಸೆಂಡೆಂಟಲ್!
ಅತೀಂದ್ರಿಯ ಧ್ಯಾನ !
ಇಂದ್ರಿಯಾತೀತ ಕನಸು!

ಜನ್ಮಾಂತರದ ಧಾರಾವಾಹಿ!!


ಡಾ.ಡೋ.ನಾ.ವೆಂಕಟೇಶ

2 thoughts on “ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ಪ್ರೇಯಸಿ

  1. ಪ್ರೇಯಸಿ ಒಂದು ಸುಂದರ ಕವಿತೆ. ದೇವರಿಗೆ ಧನ್ಯವಾದಗಳು ಅವಳು ನಮ್ಮ ಕನಸಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾಳೆ. ಅವಳ ಬಗ್ಗೆ ನಿಮ್ಮ ಆಲೋಚನೆ ನನಗೆ ತುಂಬಾ ಇಷ್ಟವಾಯಿತು.

Leave a Reply

Back To Top