ಜಯದೇವಿ ಆರ್ ಯದಲಾಪೂರೆ ಅವರ ಕವಿತೆ-ಚೂಡಿದಾರ

ಕಾವ್ಯ ಸಂಗಾತಿ

ಜಯದೇವಿ ಆರ್ ಯದಲಾಪೂರೆ

ಚೂಡಿದಾರ

ಬಂತು ಚೂಡಿದಾರ್
ಮಾಡಿತು ಸೀರೆ ಕುಪ್ಪಸ
ಅಂತ್ಯಸಂಸ್ಕಾರ

ಭರದಿಂದ ಹೊರಟಿತ್ತು ಜೋರು
ಬೇಬಿಯಿಂದ ದಾದಿವರೆಗೆ
ತೊಡತಾರ ಚೂಡಿದಾರ

ಮಹಲ ಅಂಗಡಿಗಳಲ್ಲಿ
ರಂಗು ರಂಗಿನ ಚೂಡಿದಾರ
ಥಳ ಥಳ ಹೊಳೆಯುತ್ತ ನೇತಾಡತಾವ

ಅಜ್ಜಿ ನೋಡಿ ಅಜ್ಜಗ
ಬೇಡತ್ತಾಳ ಚೂಡಿದಾರ
ಕಾಣುತ್ತಾಳ ಚಿಕ್ಕವಳ ಥರ

ಸಭೆ ಸಮಾರಂಭಗಳಲ್ಲಿ
ಚೂಡಿದಾರ ಉಟ್ಟವರು
ಕಾಣುತಾರ ಭರಪೂರ

ಮುದಕರು ನೋಡಿ
ಮೀಸಿ ತಿರುತ್ತಾರ
ಚೂಡಿದಾರ ಹೊರಟಿದೆ ಜೋರ


ಜಯದೇವಿ ಆರ್ ಯದಲಾಪೂರೆ

One thought on “ಜಯದೇವಿ ಆರ್ ಯದಲಾಪೂರೆ ಅವರ ಕವಿತೆ-ಚೂಡಿದಾರ

Leave a Reply

Back To Top