ಇಂದಿರಾ.ಕೆ ಅವರ ಕವಿತೆ-ಈ ಸೂರ್ಯಕಾಂತಿ

ಕಾವ್ಯ ಸಂಗಾತಿ

ಇಂದಿರಾ.ಕೆ

ಈ ಸೂರ್ಯಕಾಂತಿ

ಅವನಿಯ ಮಡಿಲಲಿ ನಿಂತು
ಹಸಿರ ಹೊದಿಕೆಯ ಹಾಸಿ
ಹೊನ್ನ ಬಣ್ಣವನು ಹರಡಿ
ಬಳಕುತ್ತಾ ಬಾಗುತ್ತಾ
ಕಣ್ – ಮನ ಸೆಳೆದಂತಿತ್ತು
ಈ ಹೂವಿನ ಪಂಕ್ತಿ…

ಮೋಡ ಮುಸುಕಿದ ಬಾನಲ್ಲಿ
ರವಿಯನು ನೋಡುತ್ತಾ
ಮುದುಡಿ ಬಾಡಿಹುದು
ಈ ಮೊಗದ ಕಾಂತಿ…

ಕಾಣದ ಕಿರಣಗಳ ಸ್ಪರ್ಶಕೆ
ನೇಸರನ ಕಾಯುತ್ತಾ
ಹೊಳಪು ಮರೆಯಾಗಿಹುದು
ಈ ಕಣ್ಣ ಕಾಂತಿ…

ನಿಲ್ಲುತ್ತಾ, ಸೋಲುತ್ತಾ
ಸೂರ್ಯನ ಆಗಮನವ
ನಿರೀಕ್ಷಿಸುತ್ತಾ ಬೇಸರಿಸಿತಿಹುದು
ಈ ಸೂರ್ಯಕಾಂತಿ….


ಇಂದಿರಾ.ಕೆ.

Leave a Reply

Back To Top