ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಲಾಕಾರ

ಡಾ ಡೋ.ನಾ.ವೆಂಕಟೇಶ

ಕಲಿಯಲಿಲ್ಲ ಕಲಾ ಕಾಲೇಜಿನಲ್ಲಿ
ಗೆಜ್ಜೆ ಕಟ್ಟಲಿಲ್ಲ ಸಂಗೀತ
ನಾಟಕ ನೃತ್ಯಗಳ ಆಲಯದಲ್ಲಿ

ಆದರೂ ವೈದ್ಯ
ಬದುಕಿಸುವ ಕಲೆಯಲ್ಲಿ ನೀ ಸಿದ್ಧ!
ಕೈ ಕಾಲುಗಳಲ್ಲಿ ತುಂಬಿಸಿ ಪುನಃ
ಚೇತನ
ನಾಟ್ಯವಾಡಿಸುವ ನಿಪುಣ
ಕಲಾಕಾರ!

ಹೃದಯದೊಳ ಹೊಕ್ಕು
ಕಿತ್ತು ಅದರಲ್ಲಿಯ ಅಡತಡೆಗಳನ್ನು
ಹೊತ್ತು ಗೊತ್ತಿಲ್ಲದ ಹೊತ್ತಿನಲ್ಲಿ
ಹಾಡಿದೆ ಹೃದಯ ಸ್ಪರ್ಶಿ ಹಾಡು.!
ಬರೆದೆ ಅವನ ಜೀವಕ್ಕೆ ಹೊಸ
ರಾಗ ತಾನ ಪಲ್ಲವಿ!

ವೈದ್ಯ ನೀನಲ್ಲವೇ ಅವನ
ಮಸ್ತಿಷ್ಕದೊಳ ಹೊಕ್ಕು
ಜೀವನದಿಗೆ ಅಣೆಕಟ್ಟು ಕಟ್ಟಿ
ಬಾಳಿನ ದಾರಿ
ಸರಿದಾರಿಗೆ ಸೇರಿಸಿದ್ದು!

ನೀನಲ್ಲವೇ
ನೇಪಥ್ಯದಿಂದ ಅವನ ಮನ,
ಅವನ ದೇಹದಂಗಗಳ ಚಲನವಲನಗಳ
ತಾಳ ಮೇಳೈಸಿದ್ದು! ಆ
ಅಂಗಾಂಗಗಳ ವಿನ್ಯಾಸಗಳ
ಕಸಿ ಮಾಡಿ ಹಾಡಿದ್ದು!!

ನೀನಲ್ಲವೇ ಓ ಸಿದ್ಧ
ಸನ್ಮಿತ್ರ ವೈದ್ಯ
ಹೊರಟೆ ಅಂದವಗೆ “ಇನ್ನೂ ಇದೆ” ಧಾರಾವಾಹಿ
ಹೇಳುತ್ತ ಮಾತಿಗೆಳೆದಿದ್ದು-
ಬದುಕುವ ಆಸೆ ಕುದುರಿಸಿದ್ದು!

ಹೇಳುತ್ತ ಹೊರಟರೆ
ಮಿತ್ರ-
ಬರೆ ಮಿತ್ರನಲ್ಲ ನೀ
ನೊಂದವರ ಸತ್ರ
ಆಶಾ ಕಿರಣ!

ಹೊಸ ಮನ್ವಂತರದ
ಸುಶ್ರುತ -ಧನ್ವಂತರಿ ನೀನು
ಸಂಜೀವಿನಿ ನೀನು!

ಸಂಗೀತಗಾರನೂ ನೀನೇ
ಕಲಾಕಾರನೂ ನೀನೇ!

ವೈದ್ಯೋ ನಾರಾಯಣೋ ಹರಿಃ


ಡಾ ಡೋ.ನಾ.ವೆಂಕಟೇಶ

About The Author

20 thoughts on “ಕಲಾಕಾರ-ಡಾ ಡೋ.ನಾ.ವೆಂಕಟೇಶ”

  1. ಡಾ||ಉಷಾ ರಮೇಶ್

    ಬಹಳ ಸೊಗಸಾಗಿ ಕವನ ಮೂಡಿ ಬಂದಿದೆ ಸರ್

  2. Good sir. ನಿಮ್ಮ ಕಾವ್ಯಧಾರೆ ಹೀಗೆಯೇ ಮುಂದುವರೆಯಲಿ.

    1. D N Venkatesha Rao

      Thank you. ನಿಮ್ಮ ಶಹಭಾಷ್ ಗಿರಿಗೆ ಧನ್ಯವಾದಗಳು!

  3. ಡಾ ಅರಕಲಗೂಡು ನೀಲಕಂಠ ಮೂರ್ತಿ

    ಪ್ರಿಯ ವೆಂಕಟೇಶ್, ವೈದ್ಯರೆಲ್ಲರಿಗು ಅವರ ಬದುಕಿನ ಸಾರ್ಥಕತೆಯ ಹಾಡನ್ನು ಹಾಡಿ ನಮ್ಮೆಲ್ಲರನ್ನು ಕೃತಾರ್ಥರಾಗಿಸಿದ್ದೀರ, ಅದಕ್ಕೆ ಧನ್ಯವಾದಗಳು ನಿಮಗೆ. ಮತ್ತು ಹೃದಯದ ಕದ ತಟ್ಟುವಂತಹ ಕವನದಿಂದ ರೋಗಿಗಳಿಗೂ ಒಂದು ಮೆಸೇಜ್ ಕಳಿಸಿದ್ದೀರ, ಅದಕ್ಕೂ ಧನ್ಯವಾದಗಳು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಮಿತ್ರ ಎಂದು ಸಾರಲು ನನಗೆ ಹೆಮ್ಮಯಾಗುವಂತಹ ಕವನ ಕಟ್ಟಿಕೊಟ್ಟಿದ್ದೀರ, ಅದಕ್ಕೆ ಎಲ್ಲಕ್ಕಿಂತ ಮಿಗಿಲಾಗಿ ನಿಮಗೆ ನನ್ನ ವೈಯಕ್ತಿಕ ಧನ್ಯವಾದ!

    1. D N Venkatesha Rao

      ಮೂರ್ತಿ, ಒಬ್ಬ ಕಲಾ ಕಾಲೇಜಿನ ವ್ಯಕ್ತಿ ತನ್ನ profession ಗಿಂತ ಶ್ರೇಷ್ಠ ಮತ್ತಾವ profession ಊ ಇಲ್ಲ ಎಂದಾಗ ಬರೆದ ಕವನ.
      ಇದು ನಮ್ಮೆಲ್ಲರ ಪ್ರೀತಿಯ ಕರ್ತವ್ಯವನ್ನು ನಾವೇ ಅಣುರಣಿಸಿ ಕೊಳ್ಳೋಣ ಅಂತ.
      ನಿಮ್ಮೆಲ್ಲರ ಅಭಿಮಾನ ಕ್ಕೆ ಧನ್ಯವಾದಗಳು!

  4. “ಕಲಾಕಾರ”
    ವೈದ್ಯರ ಕರ್ತವ್ಯಗಳ ಮೇಲಿನ ಭಕ್ತಿಯನ್ನು ವಿವರಿಸಲು ನೀವು ವಿನಮ್ರ ಪ್ರಯತ್ನವನ್ನು ಮಾಡಿದ್ದೀರಿ. ಇದು ತುಂಬಾ ಚೆನ್ನಾಗಿ ಬಂದಿದೆ.
    ಶುಭಾಷಯಗಳು

    1. D N Venkatesha Rao

      ಧನ್ಯವಾದಗಳು ಮಂಜು ಪೈ
      ನಾ ಹೇಗೇ ಬರೆದರೂ ನನಗೆ ಸದಾ ನಿಮ್ಮ ಜೈ!

  5. Dr K B SuryaKumar

    ಬದುಕಿಸುವ ಕಲೆಯಲ್ಲಿ ವೈದ್ಯ ಸಿದ್ದ,
    ಅದನು ನಮಗೆ ತಿಳಿಪಡಿಸಿದ ಈ ಬುದ್ಧ,
    ಸಂಗೀತಗಾರನೂ ವೆಂಕಣ್ಣ,
    ಕವಿಯೂ ನಮ್ಮ ಈ ಅಣ್ಣ .
    ಎಷ್ಟೊಂದು ಹೊಗಳಲಿ ನಿನ್ನ ಕವನ,
    ಆನಂದ ಪಡಲಿದೆ ನಮಗೆ ನಿಮ್ಮ ಸುಂದರ ಬನ.

    1. D N Venkatesha Rao

      ಸೂರ್ಯ ನೀವು ನನ್ನ commited ಚಪ್ಪಾಳೆಗಾರ
      ನಿಮ್ಮ ಈ ಉತ್ಸಾಹದ appreciation ನಲ್ಲಿ ನಿಮ್ಮಿಂದ ಬಂದಿದೆ ಒಂದೊಳ್ಳೆ *ಬನ* !

Leave a Reply

You cannot copy content of this page

Scroll to Top