ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಜೊತೆಯಲಿ
ಪಯಣದ ಬಲು ದೂರ ದಾರಿ
ಸಾಗಿರುವೆ ಏಕಾಂಗಿಯಾಗಿ
ಸ್ವಲ್ಪ ದೂರದ ತಿರುವಿನಲಿ
ಕಾದಿಹುದೊಂದು ಜೀವ…
ಒಲುಮೆಯ ಭಾವ…
ಜೊತೆಗೆ ಅರಿತು ಬೆರೆಯುತ ….ಮುಂದೆ ಸಾಗುವ
ಕಡಲ ಪ್ರೀತಿಯ ಹೊತ್ತು
ಸಂಜೆ ಗೆಂಪಿನ ಹೊತ್ತು
ಸ್ನೇಹ ಸೌರಭ ಮುತ್ತು
ಭಾವ ಒಲುಮೆಯ ತುತ್ತು
ಬಿತ್ತಿ ಬೆಳೆಯಲು ಸುತ್ತ ಮುತ್ತು
ಜೀವ ತೇದು ನಗುತ ನಲಿದು… ಮುಂದೆ ಸಾಗುವ
ಸ್ನೇಹ ಸಿಂಚನ ಅಪ್ಪಿ
ಹಾಕಬೇಕು ಹೆಜ್ಜೆ ಒಪ್ಪಿ
ದೂರ ಪಯಣಕೆ….
ಭಾವ ಬುತ್ತಿಯ ಬಿಚ್ಚಿ
ಬದುಕು ಭರವಸೆ ಹೆಚ್ಚಿ
ಒಲುಮೆ ನಲುಮೆ ದಾರಿಯಲ್ಲಿ….ಮುಂದೆ ಸಾಗುವ
ಸ್ನೇಹ ಕರಗಳ ಚಾಚಿ
ಜೀವ ಕೊರಡನು ತೇದು
ಗಂಧ ಪರಿಮಳ ಬೀರಿ….
ಸರಿಸಿ ಕವಿದ ಕತ್ತಲು
ಬೆಳಕ ದಾರಿ ಸುತ್ತಲು
ಪ್ರೀತಿ ಹಣತೆ ಹಚ್ಚಿ ಮೆಲ್ಲನೆ…. ಮುಂದೆ ಸಾಗುವ
_ಇಂದಿರಾ ಮೋಟೆಬೆನ್ನೂರ.
ನೈಸ್