ಅಮ್ಮು ರತನ್ ಶೆಟ್ಟಿಯವರ ಕವಿತೆ, ಪ್ರೀತಿ

ಕಾವ್ಯ ಸಂಗಾತಿ

ಅಮ್ಮು ರತನ್ ಶೆಟ್ಟಿ

ಪ್ರೀತಿ

ಆಗುಂಬೆಯ ತುಂತುರಿನಂತೆ
ನಿರಂತರ ಸಾಗುವ
ನನ್ನ ಕವಿತೆಯ ಸಾಲುಗಳು
ನಿನ್ನ ಮೌನಕ್ಕಿಂತ ಹಿತವಲ್ಲವೇ

ಯಾರಿಗೂ ತಿಳಿಸದೇ
ಮನಸೊಳಗೆ ಬಚ್ಚಿಟ್ಟ
ನಿನ್ನ ಪ್ರೀತಿಗಿಂತಲೂ
ನನ್ನ ಮಾತುಗಳೇ ನಿಜವಲ್ಲವೇ

ಕ್ಷುಲ್ಲಕ ಕಾರಣ ಹೇಳಿ
ಇಲ್ಲಸಲ್ಲದ ಆರೋಪ ಮಾಡಿ
ಈ ಹೃದಯ ಘಾಸಿಗೊಳಿಸಿದರೂ
ಮರೆಯದ ಈ ಪ್ರೀತಿ ನಿಜವಲ್ಲವೇ

ಸಾವಿರ ಕನಸುಗಳ ಹೊತ್ತ
ಮನಸು ಸಂಚರಿಸುತ್ತಿತ್ತು ನಿನ್ನ ಸುತ್ತ.
ಮರುಕಳಿಸುವ ನೆನಪುಗಳು ಮಾತ್ರ
ನೀ ದೂರ ಮಾಡಿದ ಬದುಕಿನಲ್ಲೀಗ


ಅಮ್ಮು ರತನ್ ಶೆಟ್ಟಿ

One thought on “ಅಮ್ಮು ರತನ್ ಶೆಟ್ಟಿಯವರ ಕವಿತೆ, ಪ್ರೀತಿ

Leave a Reply

Back To Top