ಕಾವ್ಯ ಸಂಗಾತಿ
ಡಾ. ಶ್ರೀಶೈಲ ಮಾದಣ್ಣವರ
ಗಜಲ್
ನೀನು ನಡೆವ ದಾರಿಯೇಕೆ ಅಷ್ಟು ಇಷ್ಟು ದೂರ:
ನೀನು ಬರುವ ಹೆಜ್ಜೆ ಸದ್ದು ಇನ್ನು ಎಷ್ಟು ದೂರ?!
ನಿನ್ನ ದಾರಿ ಕಾದು ನಿಂತು ಹೃದಯವೆಲ್ಲ ಭಾರ:
ನೀನು ಬರದೆ ಕನಸುಗಳು ಕಾಣದಷ್ಟು ದೂರ!
ಉಲಿದು ಬರುವ ನಿನ್ನ ದನಿಗೆ ಕಾಯುತಿದೆ ಜೀವ
ನಿನ್ನ ಪ್ರೀತಿಮಾತು ಇಂದು ಮುಗಿಲನಷ್ಟು ದೂರ!
ನಿನ್ನ ನಗೆಯ ಮಿಣುಕಿಗಾಗಿ ಹಲುಬುತಿರುವೆ ನಾನು:
ಎದೆಗೆ ಸಿಗದ ನಿನ್ನ ನಗುವು ತಾರೆಯಷ್ಟು ದೂರ!
ನಾಳೆ ಬರುವೆ ಎಂದು ಮುದುಡಿ ಮುದುಡಿ ಮಲಗಿದೆ
ನಿನ್ನ ಬಿಸಿ ಅಪ್ಪುಗೆಯೀಗ ಮುಂಜಾವಿನಷ್ಟು ದೂರ!
ಬಳಿಗೆ ಬಂದ ಅಧರ ಮಧುವಿಗೆ ಹಾತೊರೆಯುತಿದೆ ಮನವು:
ದೂರ ನಿಂತ ನಿನ್ನ ತುಟಿಯ ಅಂಚು ಒಂದುಮಾರು ದೂರ!
ಓಡಿ ಬಂದು ರೆಪ್ಪೆ ಮುಚ್ಚಿ ಅಪ್ಪಿ ನಿಂತೆ ನೀನು
ನೋಟ ಬೆರೆಸಿ ನನ್ನ ಕೊಲ್ಲಲು ಕಣ್ಣು ಎಷ್ಟು ದೂರ?!
————————–
ಡಾ. ಶ್ರೀಶೈಲ ಮಾದಣ್ಣವರ
ಸುಂದರ ಸಾಹಿತ್ಯ ಸರ್
Nice sir.
ವಣಿ೯ಸಲಸದಳ