ಏನಾಯಿತು…?ಇಂದಿರಾ ಮೋಟೆಬೆನ್ನೂರ

ಕಾವ್ಯ ಸಂಗಾತಿ

ಏನಾಯಿತು…?

ಇಂದಿರಾ ಮೋಟೆಬೆನ್ನೂರ

ನೆಲದ ಪಿಸುಮಾತು
ತಲುಪಿತೆ ಮುಗಿಲು
ನೆಲದ ಕಿರು ನಗುವು
ಮುಡಿಯಿತೆ ನಭವು…

ಬೆಳಕ ಕಿರಣವು
ಮಿಡಿಯಿತೆ ಹಗಲು
ಇರುಳ ಚುಕ್ಕೆಯು
ನುಡಿಯಿತೆ ಒಲವು..

ಹಕ್ಕಿ ಗಾನವು
ತಣಿಸಿತೆ ಮನವು
ಚುಕ್ಕಿ ಮಿನುಗದು
ಕುಣಿಸಿತೆ ಸೊಬಗು…

ಮೌನ ಪ್ರೀತಿಯು
ತಬ್ಬಿತೆ ಹೃದಯ
ಮಾತ ಬಳ್ಳಿಯು
ಹಬ್ಬಿತೆ ಮನವ…

ಎದೆ ಸುಡುವ ಬೆಂಕಿ
ಕಾಡಿತೆ ಪ್ರೀತಿ
ಬಿತ್ತಿ ಬೆಳೆದ ಭಾವಕೆ
ಮೂಡಿತೆ ಭೀತಿ….


ಇಂದಿರಾ ಮೋಟೆಬೆನ್ನೂರ.

Leave a Reply

Back To Top