ಕಾವ್ಯಯಾನ

ಗಝಲ್

ಡಾ.ಸುಜಾತ ಲಕ್ಷ್ಮೀಪುರ.

ಕತ್ತಲೆ ಗರ್ಭ ಸೀಳಿ ಅರಿವಿನ ಬೆಳಕು ತಂದ ಈ ಭೀಮ
ಅಸ್ಪರ್ಶ ಕೊಳಕು ತೊಳೆಯುವ ಜಲವಾಗಿ ಬಂದ ಈ ಭೀಮ

ಬಡತನ ಹಸಿವು ನಮ್ಮ‌ನ್ನು ರೂಪಿಸುತ್ತದೆಯಂತೆ
ಗುಡಿಸಿಲಿನಿಂದಲೇ ಅಸಮಾನತೆಯಲ್ಲೇ ಮೂಡಿದ ಈ ಭೀಮ

ಕೊರೆತೆಯಲ್ಲೆ ಕೊರಗಿ ಕೂತವರು ಏನು ಸಾಧಿಸುವರು
ಅಸಮಾನತೆ ವಿಷಗಾಳಿಯಲಿ ಸಮಾನತೆಯ ಉತ್ತಿ ಬೆಳೆದ ಈ ಭೀಮಾ

ಜ್ಣಾನವೊಂದೆ‌ ಮುಕ್ತಿಗೆ ಮಾರ್ಗ ವೆಂಬುದು ಸತ್ಯವಲ್ಲವೆ
ಅಜ್ಞಾನದ ಆಲಯದಿ ಬೆಳಕಿನ ಬಯಲು ಸುರಿದ ಈ ಭೀಮಾ

ನನ್ನ ಜನ ನನ್ನ ನಾಡು ಎನ್ನದವರ ಎದೆ ಬೆಂಗಾಡು
ಜನರ ಹಸಿವು ನೋವಿಗೆ ಮಿಡಿದು ದುಡಿದ ಈ ಭೀಮಾ

ಪ್ರಜಾಪ್ರಭುತ್ವದ ಜೀವಾಳವೆ ಮತದಾನ ಅಲ್ಲವೇ
ಹಕ್ಕು ಬಾಧ್ಯತೆಗಳ‌ನು ಕಾನೂನಿನ ಮೂಲಕವೆ ಕೊಡಿಸಿದ ಈ ಭೀಮಾ

ಸರ್ವೋದಯ ಸಮಾನತೆ ಸಾಮಾಜಿಕ ನ್ಯಾಯ ಇದ್ದೆಡೆ ಸ್ವರ್ಗ
ಎಲ್ಲರ ಅಭ್ಯದಯಕಾಗಿ ಸಂವಿಧಾನ ರೂಪಿಸಿದ ಈ ಭೀಮಾ

ಶಿವೆ,ಬಾಬಾ ಸಾಹೇಬರ ಅಂಬೇಡ್ಕರ್ ಬಗೆಗೆ ಎಷ್ಟು ಹೇಳಿದರೂ ಅಪೂರ್ಣವೆ
ದೇಶದ ಜನತೆಗೆ ಬದುಕು ಕೊಟ್ಟ ಭಾರತ ಭಾಗ್ಯವಿದಾತ ಆದ ಈ ಭೀಮ.

*********

Leave a Reply

Back To Top