ಕಾವ್ಯ ಸಂಗಾತಿ
‘ಕನಸು ಕಾಡುವ ರಾತ್ರಿ..‘
ರಾಶೇ.. ರವರ ಕವಿತೆ
ಕತ್ತಲಾದ ಹೊತ್ತು
ಕನಸಿನ ರಾಶಿ ಗಮ್ಮತ್ತು
ತಂಪು ಹಾಸಿಗೆಯಲಿ
ಕೆಂಡ ಸಂಪಿಗೆಯ ಘಮಲು
ಒಲವಿನ ಚಿತ್ತದೊಳು
ಸಿಹಿಜೇನ ಬೆರೆಸಿದ
ಪ್ರೇಮಧಾರೆಯಲಿ
ಮಿಂದು ಮಾರ್ಧನಿಸಿದೆ
ಅದರಕೆ ಮುತ್ತಿನ ಮತ್ತು
ಒಡಲೊಳಗೆ ಕಿಚ್ಚು
ನಿಲುಕದ ನಡುಕದ ದೇಹ
ಮಂಪರಿನ ಮಂಕು
ಆವರಿಸುತಿದೆ ಮೆಲ್ಲನೆ
ತನುವಿನಲವಳ ಪ್ರೀತಿ ಹಾಸಿಗೆಯಲವವಳ
ಅಪ್ಪುಗೆಯ ಹೊದಿಕೆಯಲಿ ಕಣ್ಮುಚ್ಚಿದೆ ನೆನಪಿನ ಸಿರಿಯಲಿ
ಅವಳ ಬಿಸಿಯುಸಿರು
ಮೈ ಸೋಕಿ ಎಚ್ಚರ ಕಣ್ಬಿಟ್ಟೆ
ಮುಂಜಾನೆ ಮಂಜಿನ ತೆರೆ ಸರಿಯಿತು
ರಾಶೇ..