ಇಂದಿರಾ ಮೋಟೆಬೆನ್ನೂರ ಕವಿತೆ-ಮಾತಾಡ ಮಾತಾಡ ಮಲ್ಲಿಗೆ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಮಾತಾಡ ಮಾತಾಡ ಮಲ್ಲಿಗೆ

ಮಲ್ಲಿಗೆ ಮನದ
ಕವನ ದವನ
ಬೆಳಕು ಬರೆದ
ಮುಂಜಾವ ಮುನ್ನುಡಿ

ಮೌನ ಮುಸುಗು
ಸರಿಸಿ ನಸುಕು
ನುಡಿದ ಹಗಲು
ನಗುವ ಕನ್ನಡಿ

ಮಂಜ ಮುತ್ತು
ಮುತ್ತಿಟ್ಟ ಹೊತ್ತಲಿ
ಭಾವ ಬಿತ್ತನೆ
ಸ್ನೇಹ ಚೆನ್ನುಡಿ..

ಅವನೂ ಮೌನ
ಮಾತೂ ಮೌನ
ಸಾಕಿನ್ನು ಮೌನ
ಬರೆಯೇ ಹೊನ್ನುಡಿ

ಮೋಡ ಮರೆಯ
ಚಂದಿರ ಚೆನ್ನನ
ಪಯಣವೆಲ್ಲಿಗೆ
ದೂರ ಗಗನದಿ…

ಜೊನ್ನ ಮಳೆ
ಮೊಲ್ಲೆ ಮೊಗಕೆ
ನಗುವ ತುಂಬೆ
ಶಶಿಯ ನೆನಪಡಿ…

ಹಸಿರ ಹಂದರ
ಉಸಿರ ತೇರಲಿ
ಜೀವ ಪರಿಮಳ..
ಇಡುತ ಮೆಲ್ಲಡಿ…

ಜೇನ ಮಾತಲೆ
ಒಲುಮೆ ಮೆಲ್ಲಲೆ
ಮೊಲ್ಲೆ ಭಾವದಲೆ
ಸಿರಿಮುಡಿ ಜೀವ ನಿನ್ನಡಿ…


ಇಂದಿರಾ ಮೋಟೆಬೆನ್ನೂರ.

Leave a Reply

Back To Top