ಮಾಜಾನ್ ಮಸ್ಕಿ ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಜಾನ್ ಪದ್ಯಗಳು

ವೇದನೆಯ ಉಂಡು ನಗಿಸಬೇಕು ಬಾಳಿನಲ್ಲಿ
ಜಾನ್!!
ತುಳಿಯುವವರ ಮುಂದೆ ನಿಲ್ಲಬೇಕು ಬಾಳಿನಲ್ಲಿ

ಪ್ರೀತಿ ಇದ್ದಿದ್ದೇ ಆದರೆ ಮನ ಕರಗುತ್ತಿತ್ತು
ಜಾನ್!!
ಕಷ್ಟದಲ್ಲಿ ಸದಾ ಜೊತೆಯಾಗಿರುತ್ತಿತ್ತು

ಪ್ರೀತಿ ನಿಜವಾಗಿ ಇದ್ದದ್ದೇ ಆದರೆ ಮರಳಿ ಬರುವುದು
ಜಾನ್!!
ದೋಷ ನಿನ್ನಲ್ಲಿ ಇದ್ದು ಬೇರೆಯವರಿಗೆ ದೂಷಿಸಬಾರದು

ನಂಬಿಕೆಯೇ ಇಲ್ಲದವರಲ್ಲಿ ನಂಬಬೇಡ
ಜಾನ್!!
ಸಂಶಯದ ಸುಳಿಯಲ್ಲಿ ಸಿಲುಕಿ ಸಾಯಬೇಡ


ಮಾಜಾನ್ ಮಸ್ಕಿ

Leave a Reply

Back To Top