ನಳಿನಾ ದ್ವಾರಕನಾಥ್ ಕವಿತೆ-ಅನನ್ಯ_ಪ್ರೀತಿ

ಕಾವ್ಯ ಸಂಗಾತಿ

ಅನನ್ಯ_ಪ್ರೀತಿ

ನಳಿನಾ ದ್ವಾರಕನಾಥ್

ನನ್ನಾಸೆಯ ಹೂವೆ
ನೀನಾದೆ ನನ್ನೊಲವೆ
ಬಳಿ ನೀನಿರಲು
ಮಲ್ಲಿಗೆಯ ಘಮಲು

ನನಗಾಗಿ ನೀ ಬಂದೆ
ಬದುಕುವ ಆಸೆ ತಂದೆ
ನನ್ನ ಬಾಳಿನ ಚೇತನ
ನೀಡಿದೆ ಸಿಹಿ ಹೂರಣ

ನನಗೆ ನೀನೇ ಎಲ್ಲಾ
ನೀನಲ್ಲದೇ ಮತ್ತಾರು ಇಲ್ಲ
ನಿನ್ನೊಂದಿಗೆ ನೋವು ನಲಿವೆಲ್ಲಾ
ನಮ್ಮಿಬ್ಬರ ನಡುವೆ ಯಾರಿಲ್ಲ

ನೀನಿರದ ಆ ಕ್ಷಣ
ಮನವೆಲ್ಲಾ ತಲ್ಲಣ
ಅಗಲಿ ಇರಲಾರೆ ಪ್ರತಿಕ್ಷಣ
ಜೊತೆಯಾಗಿ ಬರಲಿ ಮರಣ

ನನ್ನ ನಗುವು ನಿನ್ನ ಮೊಗದಲಿ
ನನ್ನ ನಲಿವು ನಿನ್ನ ಮಡಿಲಲಿ
ನಮ್ಮ ಬದುಕಿದು ಮಾದರಿ
ನಾವೇ ಇಲ್ಲಿ ಚಂದ್ರ ಚಕೋರಿ


ನಳಿನಾ_ದ್ವಾರಕನಾಥ್

Leave a Reply

Back To Top