ಕಾವ್ಯ ಸಂಗಾತಿ
ನಮ್ಮೆದೆಯ ಬಯಲು ಹಸಿರಾಗಿರಲು…
ಮಹಾಂತೇಶ್.ಬಿ.ನಿಟ್ಟೂರು,
ನಮ್ಮೆದೆಯ ಗೂಡು ಹಸಿರಾಗಿರಲು;
ಹಕ್ಕಿಗಳು ಬಂದು ಕೂರುವವು,
ಬೇಧ-ಭಾವ ಮರೆತು, ತಮ್ಮತನ ಅರಿತು
ಮನಸಾರೆ ಹಾಡಿ ನಲಿಯುವವು
ಮಂದಹಾಸದಿ ಒಲವಿನ ಗೀತೆಯೊಂದಿಗೆ!
ನಮ್ಮೆದೆಯ ತೋಟ ಹಸಿರಾಗಿರಲು;
ಅರಳುವವು ಹೂವು
ಮರೆಯುತಾ ನೋವು!
ದೂರದಿಂದಲೇ ಕೇಳುವುದು
ದುಂಬಿಗಳ ಗಾನ….
ಪರಾಗದ ರಾಗ ರಂಜನೆಯಲಿ
ಅನುರಾಗದ ತಾನ ತನನ!
ನಮ್ಮೆದೆಯ ಅಡವಿ ಹಸಿರಾಗಿರಲು;
ಅಸೂಯೆಯ ಧಿರಿಸು ಕಳಚಿ
ಪರಸ್ಪರ ಪ್ರೀತಿ ಪ್ರೇಮ ಸ್ನೇಹದಿ
ಹಾಯಾಗಿ ಆಡುವವು
ಪ್ರಾಣಿ-ಪಕ್ಷಿಯ ಮನಸುಗಳು,
ಜಗ ಬೆಳಗುವ ಕನಸುಗಳು!
ನಮ್ಮೆದೆಯ ಬಯಲು ಹಸಿರಾಗಿರಲು;
ಹೆಸರು, ಕೀರ್ತಿ, ಪದವಿ, ಪದಕದ
ಕೆಸರಿನ ರಾಡಿ ಮೈಗೆ ಹತ್ತದು!
ಬಾಂಧವ್ಯದ ಮೇಘ ಮಾಲೆ
ಮಳೆಯ ಸಿಂಚನಗೈಯಲು
ನೆರೆ ಹೊರೆಯ ನೊರೆಜಲ
ಎಂದೂ ಬತ್ತದು….!
ಮಹಾಂತೇಶ್.ಬಿ.ನಿಟ್ಟೂರು,
Congratulations Sir, you are the best modern literature poet . God give you good strength ,thought, service and sacrifice.above poem is gives good information in our society in our present situation.
❤️
ಕವಿತೆಗಳು ತುಂಬಾ ಚೆನ್ನಾಗಿವೆ ನಿಮ್ಮ ಈ ಕನ್ನಡದ ಕಾಯಕ ನಿರಂತರವಾಗಿ ಸಾಗಲಿ
ನಿಮ್ಮ ಶಿಷ್ಟ ವಿಶಿಷ್ಟ ಕವಿತೆಗಳ ಕೃಷಿ ಮುನ್ನಡೆಯಲಿ… ಸದಾ ಗುರುಕೃಪೆಯಿರಲಿ